‘ಕಣ’ ಲೇಖಕ ಡಾ. ಟಿ. ಗೋವಿಂದರಾಜು ಅವರು ಜಾನಪದದ ಬಗ್ಗೆ ಬರೆದಿರುವ ಸಂಶೋಧನಾತ್ಮಕ ಕೃತಿ. ಗೋವಿಂದರಾಜು ಅವರು ಜಾನಪದವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಕಮ್ಮಟಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದವರು. ವಿಶ್ವವಿದ್ಯಾನಿಲಯ ವ್ಯಾಪ್ತಿಯಿಂದ ಹೊರಗಿದ್ದುಕೊಂಡು ತಮ್ಮ ಮಿತಿಯಲ್ಲೇ ತಮಗೆ ಸಾಧ್ಯವಾಗುವಷ್ಟು ಸಕ್ರಿಯವಾಗಿಯೇ ಜಾನಪದ ಕೆಲಸವನ್ನು ಮಾಡುತ್ತಾ ಬಂದವರು.
ಈ ಕೃತಿಯಲ್ಲಿ ಅಧಿಜಾನಪದ: ಪರಿಕಲ್ಪನೆ, ಅರ್ಥವಿಸ್ತರಣೆ, ಒಗಟಿಗೆ ಎಷ್ಟು ಉತ್ತರ, ಪ್ರಾಚ್ಯ ವಾದ್ಯವಿಜ್ಞಾನ, ಆರತಕ್ಷತೆ ಜನಗಳು- ಒಂದು ಅಂತರ್ ನೋಟ, ದನಗಳ ಜಾತ್ರೆ- ಒಂದು ಜಾನಪದ ಅಧ್ಯಯನ, ಜಾನಪದ ಅಧ್ಯಯನದ ಒಂದು ಘಟಕವಾಗಿ-ಹಳ್ಳಿ, ಆಯಗಾರರು, ಹಡದಿಗಾರರು ಹಾಗೂ ವಿನಿಮಯಗಾರರು, ದಕ್ಷಿಣ ಕರ್ನಾಟಕದ ಗ್ರಾಮವಿನ್ಯಾಸಗಳು, ಮುಸ್ಲಿಮರ ಮದುವೆ ಸಂಪ್ರದಾಯ, ಸಾಂದರ್ಭಿಕ ಸಿದ್ಧಾಂತ, ಸ್ಥಿತ್ಯಂತರದ ಬದುಕಿನಲ್ಲಿ ಬೇಟೆ ಸಂಸ್ಕೃತಿ, ಕರ್ನಾಟಕ ಗ್ರಾಮದೇವತೆಗಳು, ಗರತಿಯ ಹಾಡು- ಪುನರ್ವಿಮರ್ಶೆ, ಜನಪದಗೀತೆಗಳನ್ನು ಬರೆಯುತ್ತಿದ್ದರೇ, ಜನಪದ ಸಂಗೀತದ ಉಳಿವು ಬೆಳವು, ಜಾನಪದ 1995: ಜೀವನ ಚರಿತ್ರೆಗಳು ಮತ್ತು ಸಂಸ್ಮರಣ ಗ್ರಂಥಗಳು, ಕರ್ನಾಟಕ ಜಾನಪದೀಯ ಚಟುವಟಿಕೆಗಳು, ಜನಪದದ ಕವಿತೆಯ ಅಂತರಂಗ-ಬಹಿರಂಗ ಸೇರಿದಂತೆ ಜಾನಪದ ಆಸಕ್ತರ ಗಮನಸೆಳೆಯುವ ಹಲವು ಅಧ್ಯಯನಗಳಿವೆ. ಲೇಖಕ ಗೋವಿಂದರಾಜು ಜಾನಪದ ಅಧ್ಯಯನಕ್ಕೆ ಹೊಸ ನೋಟ-ಒಳನೋಟಗಳನ್ನು ಸೇರಿಸಿದ್ದಾರೆ. ವಿಚಾರಬಿಂದುಗಳ ಎಳೆ ಹಿಡಿದು ಸಾಗಿ ಅವನ್ನು ವಿವಿಧ ಸ್ತರಗಳಲ್ಲಿ ವಿಸ್ತರಿಸಿ ಸಂಸ್ಕೃತಿಯ ಸುಮುಖವಾದ, ಸಮತೂಕದ ವ್ಯಾಖ್ಯಾನ ಮಾಡಿದ್ದಾರೆ.
©2024 Book Brahma Private Limited.