ತುಳುವ ಜಾನಪದ: ಕೆಲವು ನೋಟಗಳು

Author : ಅಮೃತ ಸೋಮೇಶ್ವರ

Pages 267

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ತುಳು ಜಾನಪದ ಮತ್ತು ಸಂಸ್ಕೃತಿಯ ಹಿರಿಯ ಸಂಶೋಧಕ ಅಮೃತ ಸೋಮೇಶ್ವರ ಅವರು ಜಾನಪದ, ಯಕ್ಷಗಾನ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ಕೊಟ್ಟವರು. ತುಳುಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಳೆದ 50 ವರ್ಷಗಳಿಂದ ಅಧ್ಯಯನ ನಡೆಸುತ್ತ ಬಂದಿದ್ದು, ಬತ್ತಲಾರದ ಗಂಗೆ, ತುಳುವ ಜಾನಪದ : ಕೆಲವು ನೋಟಗಳು ಅಧ್ಯಯನ ಮತ್ತು ಚಿಂತನೆಗಳ ಫಲವಾದ 25 ಸಂಪ್ರಬಂಧಗಳು ಇಲ್ಲಿ ಒಟ್ಟು ಸೇರಿವೆ.

ಮೌಖಿಕ ಸಾಹಿತ್ಯ, ಜನಪದ ರಂಗಭೂಮಿ, ಪ್ರದರ್ಶನಾತಕ ಕಲೆಗಳು ಮತ್ತು ಸಾಮಾಜಿಕ ಪ್ರಸ್ತುತತೆಗಳನ್ನು ಲೇಖಕರು ಇಲ್ಲಿ ವಿವರವಾಗಿ ಚರ್ಚಿಸಿದ್ದಾರೆ. ಕರ್ನಾಟಕ ಅಂತರ್ಗತವಾದ ತುಳುನಾಡಿನ ಸಾಂಸ್ಕೃತಿಕ ಚಹರೆಯ ಭಿನ್ನ ರೂಪಗಳನ್ನು ಮತ್ತು ಬದಲಾವಣೆಗಳನ್ನು ವಿಮರ್ಶಕರಾಗಿ ವಿವೇಚಿಸಿದ್ದಾರೆ.

About the Author

ಅಮೃತ ಸೋಮೇಶ್ವರ
(27 September 1935)

ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರರಾದ ಅಮೃತ ಸೋಮೇಶ್ವರರವರು ಹುಟ್ಟಿದ್ದು 1953 ಸೆಪ್ಟಂಬರ್ 27 ರಂದು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ಸಾಹಿತ್ಯ ರಚನೆಗೆ ತೊಡಗಿದ್ದು ತುಳು ಹಾಗೂ ಕನ್ನಡದಲ್ಲಿ. ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಮುಗಿಸಿದ ಅವರು ಪ್ರೌಢ ಶಿಕ್ಷಣವನ್ನ ಆನಂದಾಶ್ರಮದಲ್ಲಿ ಮಾಡಿದ್ದಾರೆ. ಆನಂತರ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದು, ಮದರಾಸು ವಿಶ್ವವಿದ್ಯಾಲಯದಿಂದ ...

READ MORE

Related Books