ಖ್ಯಾತ ಜನಪದ ಸಾಹಿತಿ ಸಿಂಪಿಲಿಂಗಣ್ಣ ಅವರು ಮಗಳು, ಸೊಸೆ, ಹೆಂಡತಿ ಹಾಗೂ ತಾಯಿ ಈ ನಾಲ್ವರ ಮಹತ್ವವನ್ನು ಬಿಂಬಿಸುವ, ಜಾನಪದೀಯ ಅಪರೂಪದ ನಂಬಿಕೆ, ಜ್ಞಾನವನ್ನು ಬಳಸಿ ಚಿಂತನೆ ನಡೆಸಿದ ಕೃತಿ ಇದು. ಧರ್ಮವೊಂದು ಪುರುಷಾರ್ಥ, ಕುಟುಂಬ ಸಂಸ್ಥೆ, ದುಡಿತ-ಮಿಡಿತ, ಪ್ರೇಮ ವಿಕಾಸದ ಪಾಠ, ಅತ್ತೆ ಮನೆಯ ಅರಸಿ, ತನ್ನಂಗ ನೋಡಿದರ, ದುಡಿಮೆಗೆ ಹೇಸಿಕೆಯೇ?, ಬೇಕಾಗಿ ಇರಬೇಕು ಇಂತಹ ಮೌಲ್ಯಯುತವಾದ ಪರಿಕಲ್ಪನೆಗಳ ವಿಶ್ಲೇಷಣೆಗೆ ಈ ಕೃತಿಯು ಮಾರ್ಗದರ್ಶನ ನೀಡುತ್ತದೆ. ಆಡುಭಾಷೆಯಲ್ಲಿ ಆಡಿದ ಮಾತುಗಳೇ ಇಲ್ಲಿ ಅನುಭವದ ಆಗರಗಳಾಗಿವೆ. ಸಶಕ್ತ ಸಾಹಿತ್ಯದ ರೂಪು ಪಡೆದುಕೊಂಡಿವೆ ಎಂದು ಕೃತಿಗೆ ನಲ್ನುಡಿ ಬರೆದ ಹಿರಿಯ ಸಾಹಿತಿ, ಚಿಂತಕ ಮ.ನಿ. ತೋಳನೂರ ಪ್ರಶಂಸಿಸಿದ್ದಾರೆ.
©2024 Book Brahma Private Limited.