ಹಿ.ಚಿ.ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು,ಲೇಖಕರು, ಪ್ರಾಧ್ಯಾಪಕರು, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದರು. ಈ ಕೃತಿಯಲ್ಲಿ ಜಾತಿ ವ್ಯವಸ್ಥೆಯಲ್ಲಿರುವ ಕೊಳಕು ಪದ್ಧತಿ, ಅದರಲ್ಲಿರುವ ಒಳ ರಾಜಕೀಯ, ಅದರ ಮುಂದುರೆದು ಯಾವ ರೀತಿ ಬೆಳೆದು ಸಮಾಜದ ಮೇಲೆ ಪರಿಣಾಮ ಬೀರಿದೆ ಈ ಸಂಗತಿಗಳ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ. ಚಿಕ್ಕಂದಿನಿಂದಲೂ ತಾವು ಪಡೆದ ಅನುಭವ , ತಮ್ಮ ನಾಡಿನ ಸಾಮಾಜಿಕ , ಸಾಂಸ್ಕ್ರತಿಕ ಚಿಂತನೆಯ ಹೊಸ ಆಯಾವನ್ನು ಇಲ್ಲಿ ಕೊಡಲಾಗಿದೆ. ಈ ಕೃತಿಯಲ್ಲಿ ಉಜ್ಜನಿ ಚೌಡನಲ್ಲಿ ನಡೆಯುವ ಕೆಲವು ವಿಶಿಷ್ಟವಾದ ಆಚರಣೆ ಮತ್ತು ಸಾಮೂಹಿಕ ಮನೋಧರ್ಮವನ್ನು ಮನೋಜ್ಞವಾಗಿ ದಾಖಲಿಸುದರ ಮೂಲಕ ಯಾವ ರೀತಿಯಲ್ಲಿ ಭಾವೈಕ್ಯತೆಯನ್ನು ಸಾರಿದೆ ಎಂಬೂದನ್ನು ವಿವರಿಸಲಾಗಿದೆ.
©2024 Book Brahma Private Limited.