`ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು ಭಾಗ-3, ಬ್ರಹ್ಮಾವರ' - ಈ ಕೃತಿಯು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ 96 ಪ್ರಾಚೀನ ದೇವಾಲಯಗಳ ಸಂಕ್ಷಿಪ್ತ ವಿವರಗಳು ಹಾಗೂ ಛಾಯಾಚಿತ್ರಗಳನ್ನು ಹೊಂದಿದೆ. ಐತಿಹಾಸಿಕ ಊರು ಬಾರಕೂರಿನ ಎಲ್ಲ ದೇಗುಲಗಳ ಶಾಸನೋಕ್ತ ಮಾಹಿತಿಯನ್ನು ಒಳಗೊಂಡಿದೆ. ಬಾರಕೂರು ಸಂಸ್ಥಾನದಲ್ಲಿ ನೂರು ದೇಗುಲಗಳಿದ್ದವು ಎನ್ನಲಾಗುತ್ತದೆ. ಅವುಗಳಲ್ಲಿ ಹಲವು ಈಗ ನಾಶವಾಗಿವೆ. ಉಳಿದವುಗಳಲ್ಲಿ ಹೆಚ್ಚಿನವನ್ನು ಈ ಪುಸ್ತಕವು ಪರಿಚಯಿಸುತ್ತದೆ. ಹೆಚ್ಚಿನ ದೇಗುಲಗಳು ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದರೂ ಕೆಲವು ದೇಗುಲಗಳು ಇನ್ನೂ ತಮ್ಮ ಮೂಲ ರೂಪದಲ್ಲಿ ಅವನತಿಯತ್ತ ಸಾಗುತ್ತಿರುವುದೂ ಕಂಡುಬರುತ್ತದೆ. ಕಣ್ಣ ಮುಂದೆ ಇದ್ದೂ ಕಾಣದಂತಿರುವ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೇ ಈ ಪುಸ್ತಕ.
©2024 Book Brahma Private Limited.