ಆಲೂರು ವೆಂಕಟರಾಯ ಅವರು ಬರೆದ ಕೃತಿ ‘ಕರ್ನಾಟಕ -ಗತವೈಭವ’. ಕರುನಾಡಿನ ಪೂರ್ಣ ಇತಿಹಾಸದ ವಿಚಾರಗಳನ್ನೂ ಒಳಗೊಂಡು ಈ ಕೃತಿಯಲ್ಲಿ ವಿನೂತನವಾದ ರಚನಾ ಶೈಲಿ ಹಾಗೂ ವಿವೇಚನಾ ಪದ್ಧತಿಯನ್ನು ರೂಪಿಸಿಕೊಂಡಿದೆ.
‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು. ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ...
READ MORE