ಕರ್ನಾಟಕದ ಇತಿಹಾಸದಲ್ಲಿ ಬಳ್ಳಿಗಾವೆ ಪ್ರಮುಖ ತಾಣ. ಪ್ರಸ್ತುತ ಕೃತಿಯಲ್ಲಿ ಬಳ್ಳಿಗಾವೆಯ ಸಂಕ್ಷಿಪ್ತ ಇತಿಹಾಸ, ದೇವಾಲಯ ಕೇಂದ್ರವಾಗಿ ಬಳ್ಳಿಗಾವೆ, ಬಳ್ಳಿಗಾವೆಯ ಕಾಳಾಮುಖರು, ಬಳ್ಳಿಗಾವೆಯ ಸ್ಮಾರಕಗಳು-ದೇವಾಲಯಗಳು, ಕೇದಾರೇಶ್ವರ ದೇವಾಲಯ, ಕೋಡಿಯಮಠ, ನಗರೇಶ್ವರ ಅಥವಾ ಪ್ರಭುದೇವ ದೇವಾಲಯ, ಸ್ಥಳೀಯ ವಸ್ತುಸಂಗ್ರಹಾಲಯ, ತ್ರಿಪುರಾಂತಕ ದೇವಾಲಯ ಸಂಕೀರ್ಣ, ತ್ರಿಪುರಾಂತಕ ಮಠ, ಸೋಮೇಶ್ವರ ದೇವಾಲಯ, ವೀರಭದ್ರ ದೇವಾಲಯ, ಗಂಡಭೇರುಂಡ ಸ್ತಂಭ, ಜಡ್ಡಿಕೆರೆಯ ಸುತ್ತ ಮುತ್ತ ಇರುವ ದೇವಾಲಯಗಳು, ನೀಲಕಂಠೇಶ್ವರ ದೇವಾಲಯ, ಪಂಚಲಿಂಗೇಶ್ವರ ದೇವಾಲಯ ಸಂಕೀರ್ಣ, ಜಡ್ಡಿಕೆರೆ ಒಡ್ಡಿನ ಮೇಲೆ ಇರುವ ಅವಶೇಷಗಳು, ಕಲ್ಲೇಶ್ವರ ದೇವಾಲಯ, ಇತರ ಅವಶೇಷಗಳು... ಮುಂತಾದ ಮಾಹಿತಿ ಈ ಕೃತಿಯಲ್ಲಿದೆ. ರಾಜಾರಾಮ ಹೆಗಡೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.
ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ...
READ MORE