ಪ್ರವೃತ್ತಿಯಿಂದ ಸಂಶೋಧಕ, ಲೇಖಕರಾದ ಎಚ್.ಎಸ್. ಗೋಪಾಲರಾವ್ ಅವರು ಬರೆದಿರುವ ’ನಮ್ಮದಿದು ಇತಿಹಾಸ’ ಕೃತಿಯು ಕರ್ನಾಟಕದ ಇತಿಹಾಸದ ಸುತ್ತ ಚಲಿಸುತ್ತಾ ರಾಜ ಮಹಾರಾಜರ, ಪ್ರಭುತ್ವದ, ಮುಖ್ಯ ಪ್ರವಾಹದ ಬಗೆಗಿನ ಇತಿಹಾಸವನ್ನು ನಿರೂಪಿಸುತ್ತದೆ.
ಲೇಖಕರು ಕರ್ಮವೀರ ಪತ್ರಿಕೆಗಾಗಿ ’ನಮ್ಮದಿದು ಇತಿಹಾಸ’ ಅಂಕಣವನ್ನು ಮೊದಲು ಬರೆಯುತ್ತಿದ್ದರು. ಆ ಎಲ್ಲಾ ಅಂಕಣಗಳ ಬರಹ ರೂಪ ಈ ಪುಸ್ತಕವಾಗಿ ಹೊರಬಂದಿದೆ.
ಅಕ್ಬರ್ ಆಸ್ಥಾನದಲ್ಲಿದ್ದ ಏಕೈಕ ದಕ್ಷಿಣದ ಸಂಗೀತಗಾರ, ವಿದ್ವಾಂಸ ಸಾತನೂರಿನ ಪುಂಡರೀಕ ವಿಠಲ, ಬೃಹತ್ ಶಿಲಾಯುಗದ ಹೂಜಿಗಲ್ಲು, ಹಲವು ಸಾಂಸ್ಕೃತಿಕ ವಿಚಾರಗಳನ್ನು ಈ ಕೃತಿ ತೆರೆದಿಡುತ್ತದೆ.
ಕೃಷ್ಣದೇವರಾಯ, ಟಿಪ್ಪು, ಅಶೋಕ, ಶ್ರವಣಬೆಳಗೊಳದ ಬಗೆಗೂ ಚರ್ಚಿಸುವ ಈ ಕೃತಿ ಸ್ಥಳೀಯ ವಿಚಾರಗಳನ್ನೂ ಒಳಗೊಂಡಿದೆ.
ಅಕ್ಷರ ಕಲ್ಲು, ಅಶೋಕ ಮತ್ತು ಕರ್ನಾಟಕ, ಶ್ರವಣಬೆಳಗೊಳದ ಮುದ್ದು ಗೊಮ್ಮಟ, ಕೆರೆಗಳು ಮತ್ತು ಬದುಕು, ಪರಾಂಗನಾ ಪುತ್ರ ಕನ್ನರದೇವ, ಕವಿರಾಜ ಮಾರ್ಗದ ಶ್ರೀವಿಜಯ, ಬೃಹತ್ ಶಿಲಾಯುಗದ ಹೂಜಿಗಲ್ಲು, ಚೋಳರು ವಿಷ್ಣು ದ್ವೇಷಿಗಳೆ?, ಶಾಸನಗಳು ಮತ್ತು ಹಸ್ತಪ್ರತಿಗಳ ಮೇಲಿನ ಸಿಟ್ಟು, ನಮ್ಮ ಗರ್ವ ಹೆಚ್ಚಿಸುವ ಅತ್ತಿಮಬ್ಬೆ, ಕೈಫಿಯತ್ತುಗಳು, ವಕೀಲ ರಾಮಪ್ಪನ ಕೈಫಿಯತ್ತು, ಸರ್ವಜ್ಞ ಚಕ್ರವರ್ತಿ, ಶಿವಪ್ಪನಾಯಕನ ಶಿಸ್ತು, ಕರ್ಮಯೋಗಿ ಸಿದ್ದರಾಮ, ರಾಜಾವಳೀ ಕಥೆಯ ದೇವಚಂದ್ರ, ತಲಕಾಡು ಮತ್ತು ಮರಳು, ಬ್ರಿಟಿಷರ ವಶವಾದ ಬೆಂಗಳೂರು, ದೇವಾಯಲದ ಮಾರಾಟ, ಇತಿಹಾಸದ ಪುಟಗಳಲ್ಲಿ ಕಂಡ ವಚನಕಾರರು, ಗೋ ಸಾಕಣೆಗೆ ಆದ್ಯತೆ, ನರ್ತನ ಸೇವೆಗೆ ಅವಕಾಶ, ಸ್ಥಳನಾಮಗಳು, ಭೌಗೋಳಿಕ ಸ್ವರೂಪ ಮತ್ತು ಇತಿಹಾಸ ಹೀಗೆ ಹಲವಾರು ವಿಷಯಗಳನ್ನೊಳಗೊಂಡ ಲೇಖನಗಳು ’ನಮ್ಮದಿದು ಇತಿಹಾಸ’ ಕೃತಿ ಒಳಗೊಂಡಿದೆ.
©2025 Book Brahma Private Limited.