ಈ ಸಂಪುಟವು ಕರ್ನಾಟಕದ ಐತಿಹಾಸಿಕ ಕಾಲದ ಜನ ಜೀವನ, ಸಾಮಾಜಿಕ ವ್ಯವಸ್ಥೆ, ಕರ್ನಾಟಕದ ಭೌಗೋಳಿಕ ಪರಿಸರ ಮತ್ತು ಸಂಪನ್ಮೂಲಗಳು, ಮೌರ್ಯ ಮತ್ತು ಶಾತವಾಹನರ ಯುಗದ ರಾಜ್ಯಾಡಳಿತ, ಜನ ಜೀವನ, ಆರ್ಥಿಕತೆ, ಸಾಗರೋತ್ತರ ಸಂಬಂಧಗಳು, ವಿವಿಧ ಧರ್ಮಗಳ ಸಂಬಂಧ, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ರಾಜಕೀಯ ಶಕ್ತಿಗಳು ಬಳಸಿಕೊಂಡ ರೀತಿ, ಸಮಾಜದ ಶ್ರೇಣೀಕರಣ ಮತ್ತು ಆರ್ಥಿಕತೆಯಲ್ಲಿ ಅದರ ಸಂಬಂಧ, ಭೂನಿಯಂತ್ರಣ, ನಗರೀಕರಣದ ಅನುಭವ ಮತ್ತು ಬೆಳವಣಿಗೆ, ಕೃಷಿ, ಉತ್ಪಾದನೆ, ಭೂಮಾಲೀಕತ್ವದ ಸೃಷ್ಠಿ ಮತ್ತು ಬೆಳವಣಿಗೆ, ದೇಶದ ಆರ್ಥಿಕತೆ ಮತ್ತು ಸಾಮಾಜಿಕ ನೆಲೆಗಳ ಕುರಿತ ವಿವರಣೆಗಳನ್ನುಇಲ್ಲಿ ನೀಡಿದ್ದಾರೆ. ಎಸ್.ಚಂದ್ರಶೇಖರ್ ಮತ್ತು ಬಿ.ಸುರೇಂದ್ರರಾವ್ ಉಭಯ ಲೇಖಕರು ಸಂಪಾದಿಸಿದ್ದಾರೆ.
ಕರ್ನಾಟಕದ ಆಧುನಿಕ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಪ್ರಮುಖರಾದ ಎಸ್. ಚಂದ್ರಶೇಖರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಅವರು ಸದ್ಯ ನಿವೃತ್ತರಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...
READ MORE