ಬೀದರ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಎಂಬ ಪುಸ್ತಕವು 30ಕ್ಕೂ ಹೆಚ್ಚು ವಿಶಿಷ್ಟವಾದ ಸಂಶೋಧನಾ ಲೇಖನಗಳಿವೆ ಬೀದರ ಜಿಲ್ಲೆಯ ಇತಿಹಾಸ ಒಳಗೊಂಡಿದೆ. ಹೊಸ ಸ್ಮಾರಕಗಳು, ಭಕ್ತಿ ಪರಂಪರೆ, ವಚನ ಸಾಹಿತ್ಯ, ಐತಿಹಾಸಿಕ ಸ್ಮಾರಕಗಳು, ಜೈನ ನೆಲೆಗಳು, ಬೌದ್ಧ ನೆಲೆಗಳು, ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ಪರಂಪರೆ, ತತ್ವ ಪದಕಾರರ,ಜನಪದ ಸಾಹಿತ್ಯ, ಸಂಗೀತ, ಮತ್ತು ದಲಿತ ಚಳವಳಿ ಮತ್ತು ಸಾಹಿತ್ಯ ಎಂಬ ವಿಷಯವನ್ನು ಒಳಗೊಂಡಿದೆ.
ಗಾಂಧೀಜಿ ಸಿ ಮೊಳಕೇರೆ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದವರು. (ಜನನ: 02-07-1977) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ ಪದವಿ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಭಾಲ್ಕಿಯಲ್ಲಿ ಪದವಿ ಪೂರ್ಣಗೊಳಿಸಿದರು. ಬಿ ಇಡಿ ಮೈಸೂರು ವಿಶ್ವವಿದ್ಯಾಲಯದಿಂದ ಹಾಗೂ ಎಂ ಎ ಇತಿಹಾಸ , ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ 2003ರಲ್ಲಿ ಪಡೆದರು. ಪಿ.ಎಚ್.ಡಿ 2007ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯಿಂದ ಪಡೆದರು. ಪಿ.ಡಿ.ಎಫ್ ಯುಜಿಸಿಯಿಂದ ಪಡೆದರು. ಪ್ರಸ್ತುತ ಕಲಬುರಗಿಯ ಡಾ ಅಂಬೇಡ್ಕರ ಪದವಿ ಮಹಾವಿದ್ಯಾಲಯಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀದರ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಹಾಗೂ ...
READ MORE