‘ಸುರಪುರದ ದೊರೆ ವೆಂಕಟಪ್ಪ ನಾಯಕ’ ಡಾ. ವಸಂತ ಕುಷ್ಟಗಿ ಅವರ ಕೃತಿ. ಸುರಪುರದ ದೊರೆ ವೆಂಕಟಪ್ಪನಾಯಕನ ಬದುಕಿನ ಹೋರಾಟದ ಚಿತ್ರಣವಿದೆ. ವೆಂಕಟಪ್ಪನಾಯಕನ ಸ್ವಾಭಿಮಾನ, ದೇಶಾಭಿಮಾನ, ಎದೆಗಾರಿಕೆ, ಪೌರುಷತನ ಎಲ್ಲವನ್ನೂ ಚಿತ್ರಿಸಲಾಗಿದೆ.
ವೆಂಕಟಪ್ಪ ನಾಯಕ ಬ್ರಿಟಿಷರ ವಿರುದ್ಧ ಹೊತ್ತಿಸಿದ ಕ್ರಾಂತಿಯ ಕಿಡಿ ಇನ್ನುಳಿದ ಸಂಸ್ಥಾನಗಳ ಅರಸರಿಗೆ ಪ್ರೇರಣೆಯಾಗಿ ಇಡೀ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಮುಖವೆನಿಸುತ್ತದೆ. ಬ್ರಿಟಿಷರ ವಿರುದ್ಧ ವೆಂಕಟಪ್ಪನಾಯಕ ಸೋತರೂ, ಪ್ರಾಣತೆತ್ತರೂ ಅವರ ಸ್ವಾಭಿಮಾನ, ಅವರ ಎದೆಗಾರಿಕೆ ಆತನ ಗುರಿ ಜಯ ಪಡೆಯುತ್ತದೆ. ಕುತೂಹಲದ ತುದಿಗೆ ತಂದು ಕೂರಿಸುವ ಪುಸ್ತಕವು ಓದಿಸಿಕೊಳ್ಳುತ್ತದೆ.
©2024 Book Brahma Private Limited.