ಸಾಹಿತಿ ಎಂ. ನರಸಿಂಹಮೂರ್ತಿ (ಮ.ನ.ಮೂರ್ತಿ) ಅವರ ಕೃತಿ-ಬೆಂಗಳೂರು ಕೆಂಪೇಗೌಡ. ಬೆಂಗಳೂರಿನ (ಅಂದಿನ ಬೆಂದಕಾಳೂರು) ನಿರ್ಮಾತೃ ಕೆಂಪೇಗೌಡರ ಐತಿಹಾಸಿಕ ಮಾಹಿತಿಗಳನ್ನು ಒಳಗೊಂಡ ಕೃತಿ. ಕೆಂಪೇಗೌಡರ ಮೂಲ, ಅಧಿಕಾರ ಪಡೆದುಕೊಂಡ ರೀತಿ, ಬೆಂಗಳೂರನ್ನು ಕಟ್ಟಿ ಬೆಳೆಸಿದ ಆಳ್ವಿಕೆ. ಬೆಂಗಳೂರಿನ ವಿಸ್ತಾರ ಹೀಗೆ ಇಡೀ ಬೆಂಗಳೂರು ನಿರ್ಮಾಣವಾದ ಬಗೆಯನ್ನು ಲೇಖಕರು ವಿವರಿಸಿದ ಕೃತಿ.
ಮ.ನ. ಮೂರ್ತಿ (06-06-1906, 22-04-1977) ಕಥೆ, ಕಾದಂಬರಿಕಾರರು, ಪತ್ರಿಕಾ ಸಂಪಾದಕರು. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕಿನ ಮಂದಲಹಳ್ಳಿಯವರು. ತಂದೆ ಮಧ್ವರಾವ್ ಮತ್ತು ತಾಯಿ ಭೀಮಕ್ಕ. ಪ್ರೌಢಶಾಲೆ ಶಿಕ್ಷಣವನ್ನು ತುಮಕೂರಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಸೇರಿ ನಂತರ ಕನ್ನಡದಲ್ಲಿಯ ಆಸಕ್ತಿಯಿಂದ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರೀ ಹಾಗೂ ಟಿ.ಎಸ್. ವೆಂಕಣ್ಣಯ್ಯ ಅವರ ಪ್ರೋತ್ಸಾಹದಿಂದ ಬಿ.ಎ. ಪೂರೈಸಿದರು. ಕೃತಿಗಳು: ‘ಚಿಕ್ಕದೇವರಾಯ’ (ಕಾದಂಬರಿ), ‘ಟಿಪ್ಪೂ ಸುಲ್ತಾನ್’ (3 ಭಾಗಗಳಲ್ಲಿ) ಹಾಗೂ ಸಣ್ಣ ಕಥಾ ಸಂಕಲನ ‘ತಂಗಳೂಟ’. ‘ಗಾನಯೋಗಿ ರಾಮಣ್ಣ’, ‘ಸ್ವಯಂವರ’, ‘ಸುವರ್ಣ ಮುಖಿ’ (ಕಾದಂಬರಿಗಳು), ಪ್ರಜಾಮತ ವಾರಪತ್ರಿಕೆಗಾಗಿ ‘ಶಾಂತಲಾ’ ಕಾದಂಬರಿಯನ್ನು ಬರೆಯತೊಡಗಿದಾಗ ಅನಿರೀಕ್ಷಿತವಾಗಿ ಪ್ರಜಾಮತ ವ್ಯವಸ್ಥಾಪಕ ಸಂಪಾದಕರ ...
READ MORE