ಬೆಂಗಳೂರು ಪರಂಪರೆ

Author : ಎಸ್. ಕೆ. ಅರುಣಿ

Pages 356

₹ 400.00




Year of Publication: 2019
Published by: ಇತಿಹಾಸ ದರ್ಪಣ ಪ್ರಕಾಶನ
Address: #33/A , ಐ.ಟಿ.ಐ ಕಾಲೇಜಿನ ಹತ್ತಿರ, ಕೆಂಪೇಗೌಡ ನಗರ, ಬೆಂಗಳೂರು - 560091
Phone: 7829404063

Synopsys

ದೇಶದ ಬೃಹತ್ ನಗರಗಳಲ್ಲಿ ಬೆಂಗಳೂರಿನ ವಿಸ್ತಾರ, ಇತಿಹಾಸ ಬಹುದೊಡ್ಡ ಚರಿತ್ರೆಯೆಂದೇ ಹೇಳಬಹುದು.  ಬೆಂಗಳೂರಿನ ಇತಿಹಾಸದ ಬಗ್ಗೆ ನಡೆದಿರುವ ಸಂಶೋಧನೆಗಳಲ್ಲಿ  ಎಸ್. ಕೆ. ಅರುಣಿ ಅವರ ’ಬೆಂಗಳೂರು ಪರಂಪರೆ ಇತಿಹಾಸ ಸಂಶೋಧನೆಯ ಹೊಸ ನೋಟಗಳು’ ಅಪರೂಪದ ಕೃತಿಯಾಗಿದೆ. ಬೆಂಗಳೂರಿನ ಸಾಂಸ್ಕೃತಿಕ ಕಥನ, ಸಾಂಸ್ಕೃತಿಕ ಪಲ್ಲಟ, ವೈಭವ, ಕೋಟೆಗಳು,  ದೇವಾಲಯಗಳು, ಅರಮನೆ  ಕರಗೋತ್ಸವದ ಹಿನ್ನೆಲೆ, ಸಂಪ್ರದಾಯ ಮಹತ್ವಗಳನ್ನು ಸಂಪೂರ್ಣವಾಗಿ ಚಿತ್ರಿಸಿದೆ. ಬೆಂದಕಾಳೂರು ಆಧುನಿಕ ಬೆಂಗಳೂರು ನಗರವಾಗಿ ಮಾರ್ಪಾಡಾದ ಚರಿತ್ರೆ ಹಿನ್ನೆಲೆಯನ್ನು ಅಮೂಲಾಗ್ರವಾಗಿ ಚಿತ್ರಿಸಿದೆ. ಬೆಂಗಳೂರು ನಗರದ ಪ್ರತಿಯೊಂದು ನಗರಗಳ ಬಗ್ಗೆಯೂ ಚಾರಿತ್ರಿಕವಾದ ಸಂಶೋಧನೆಯನ್ನು ನಡೆಸಿದೆ. 

About the Author

ಎಸ್. ಕೆ. ಅರುಣಿ

ಎಸ್. ಕೆ ಅರುಣಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆಯ ಹಾದಿ ಹಿಡಿದಿರುವ ಇವರು ಕರ್ನಾಟಕ ಇತಿಹಾಸ, ಪುರಾತತ್ತ್ವ, ವಾಸ್ತುಶಿಲ್ಪ, ಶಿಲ್ಪಕಲೆಗೆ ಸಂಬಂಧಿಸಿದ ಸಂಶೋಧನೆಯ ಕೃತಿಗಳನ್ನು ರಚಿಸಿದ್ದಾರೆ. ಇವರ ಕರ್ನಾಟಕ ಪುರಾತತ್ವದ ಅಧ್ಯಯನಗಳನ್ನು ಸಂಪಾದಿತ ಕೃತಿಯಾಗಿ ಹೊರತಂದಿದ್ದಾರೆ. ದಖ್ಖನಿ ಚಿತ್ರಕಲೆ (2001), ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ (2007), Surapura Samsthana – Historical and Archaeological Study of a Poligar ...

READ MORE

Related Books