ಕೂಡ್ಲಿಗಿ ಕಥನಗಳು ಕೂಡ್ಲಿಗಿ ತಾಲ್ಲೂಕಿನ ಇತಿಹಾಸ, ವಿಭಿನ್ನತೆಯನ್ನು ವಿವರಿಸುವ ಕೃತಿಯಾಗಿದೆ. ಕವಿ ಕಾಣದನ್ನು ರವಿ ಕಂಡ ಎನ್ನುವಂತೆ ಪತ್ರಕರ್ತ ಭೀಮಮ್ಮ ಅವರು ಕೂಡ್ಲಿಗಿಯ ಬದುಕು ಬರಹಗಳು, ಕೂಡ್ಲಿಗಿಯ ಬಗ್ಗೆ ವಿಶೇಷವಾದ ವಿಷಯಗಳನ್ನು ತಿಳಿಸಿದ್ದಾರೆ. ಬಳ್ಳಾರಿ, ಕೂಡ್ಲಿಗಿ ಎಂದರೆ ಬಯಲುಸೀಮೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೂಡ್ಲಿಗಿ ಪರಿಸರದ ಬಗ್ಗೆ ತಿಳಿದುಕೊಳ್ಳಲು ಈ ಕೃತಿ ಮುಖ್ಯವಾಗುತ್ತದೆ. ಏಷ್ಯಾದಲ್ಲಿಯೇ ಅತಿ ಹೆಚ್ಚು ಕರಡಿಗಳಿರುವ ತಾಲ್ಲೂಕು ಕೂಡ್ಲಿಗಿ. ಈ ಬಗ್ಗೆ ಅಲ್ಲಿನ ವಾಸಿಗಳಿಗೆ ಅರಿವಿಲ್ಲ. ಇಂತಹ ನೂರಾರು ಅಚ್ಚರಿಯ ವಿಷಯಗಳು ಈ ಕೃತಿಯಲ್ಲಡಗಿವೆ. ಲೇಖಕರ ಸರಳ ಭಾಷಾ ಶೈಲಿ ಓದುಗರನ್ನು ಹಿಡಿದಿಡುತ್ತದೆ. ಲೇಖಕರು ಕನ್ನಡ ದಿನಪತ್ರಿಕೆಗೆ ವಿವಿಧ ಸಮಯಗಳಲ್ಲಿ ಬರೆದಿದ್ದ ನುಡಿಚಿತ್ರಗಳ ಸಂಗ್ರಹಿತ ರೂಪ ಇದಾಗಿದೆ.
©2024 Book Brahma Private Limited.