ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ನಾಲ್ವಡಿ ವೆಂಕಟಪ್ಪನಾಯಕನ ಊರಾದ ಸುರಪುರ ’ಶೂರರ ಪುರ’ ಎಂತಲೇ ಪ್ರಸಿದ್ಧಿಯಾಗಿತ್ತು. ಈ ಕೃತಿಯು ಸುರಪುರ ಸಂಸ್ಥಾನದ ಉಗಮ, 1857ರ ಸ್ವಾತಂತ್ಯ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ ಸ್ವಾತಂತ್ಯ್ರ ವೀರ ನಾಲ್ವಡಿ ವೆಂಕಟಪ್ಪನಾಯಕನ ವ್ಯಕ್ತಿತ್ವ, ಸುರಪುರ ದೊರೆಗಳ ಯುದ್ಧಗಳು, ರಾಜನೀತಿ, ಗರುಡಾದ್ರಿಕಲೆ, ಸುರಪುರ ಅರಸರ ಕಾಲದಲ್ಲಿ ನಿರ್ಮಾಣವಾದ ಕೆರೆ, ಬಾವಿ, ಕೋಟೆ, ಕೊತ್ತಲಗಳು, ಕೆರೆಯಂಗಳ ದಂಡಿನ ಮರಗಮ್ಮ ಮುಂತಾದ ವಿಷಯಗಳ ಕುರಿತು ಮಂಡಿತವಾದ ಪ್ರಬಂಧಗಳ ಸಂಕಲನವಾಗಿದೆ.