ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ , ಎಲ್ಲಾ ಧಾರ್ಮಿಕ ಚೌಕಟ್ಟನ್ನೂ ಮೀರಿ ಇರಬಹುದಾದ ದೇವಸ್ಥಾನದ ಸಂಪ್ರದಾಯ, ಆರಾಧನಾ ವಿಧಾನಗಳು, ಸ್ಥಳ ಪುರಾಣ, ಉತ್ಸವ ಆಚರಣೆಗಳ ಕುರಿತು ಲೇಖಕರು ಈ ಕೃತಿಯಲ್ಲಿ ಸ್ಪಷ್ಟವಾಗಿ ವಿವರಗಳನ್ನು ಒದಗಿಸಿದ್ದಾರೆ. ಭಾರತೀಯ ಸರ್ವೇಕ್ಷಣಾ ಇಲಾಖೆಯ ನೀತಿಗೆ ಆತುಕೊಂಡಂತೆ ಯಾವುದೇ ಉತ್ಪ್ರೇಕ್ಷೆ, ಮೌಢ್ಯಗಳಿಗೆ ಬಲಿಯಾಗದೆ ಒಂದು ದೇಸಿ ಇತಿಹಾಸವನ್ನು ವಸ್ತುನಿಷ್ಠವಾಗಿ, ಅಧ್ಯಯನಶೀಲವಾಗಿ ನಿರೂಪಿಸುವ ಕೆಲಸದ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ. ಇದರ ಮೂಲ ಗಾಂಭೀರ್ಯತೆಗೆ ಎಲ್ಲೂ ಧಕ್ಕೆ ಬರದಂತೆ, ಯಾವುದೇ ಅರ್ಥ ವ್ಯತ್ಯಾಸವಾಗದಂತೆ “ಮಹೇಶ ತಿಪ್ಪಶೆಟ್ಟಿ”ಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.