18ನೇ ಶತಮಾನದಲ್ಲಿ ಮೈಸೂರು ರಾಜರ ಆಳ್ವಿಕೆಯು ಕೈತಪ್ಪಿ ಒಬ್ಬ ಸಾಮಾನ್ಯ ನಿರಕ್ಷಕರ ಕುಕ್ಕಿಯಾದ ಹೈದರ್ ಅಲಿಯ ಕೈ ಸೇರಿತು. ನಂತರ, ಹೈದರ್ ಅಲಿಯು ರಾಜವಂಶದವನೆಂದೇ ಹೊಗಳುವ ತಂಡವೇ ಹುಟ್ಟಿಕೊಂಡಿತು. ನೆಪೋಲಿಯನ್ ಬೋನಾಪಾರ್ಟನನ್ನೂ ಸಹ ದೊರೆಯಾದ ಮೇಲೆ ರಾಜವಂಶನೆಂದೇ ಇತಿಹಾಸ ಬರೆಯಲಾಯಿತು ಎಂದು ವಿಶ್ಲೇಷಿಸುವ ಈ ಐತಿಹಾಸಿಕ ಬರವಣಿಗೆಯು ಹೈದರ್ ಅಲಿಯ ಆಡಳಿತ, ಜೀವನ ವೃತ್ತಾಂತವನ್ನು ಮೊದಲ ಭಾಗ ಕಟ್ಟಿಕೊಟ್ಟರೆ ತದನಂತರದ ಭಾಗವು ಆತನ ಮಗ ಟಿಪ್ಪು ಸುಲ್ತಾನನ ಆಳ್ವಿಕೆ, ಬ್ರಿಟಿಷರೊಂದಿಗಿನ ಆತನ ಹೋರಾಟ, ಆಡಳಿತದಲ್ಲಿಯ ಸುಧಾರಣೆ ಇತ್ಯಾದಿಗಳನ್ನು ದಾಖಲಿಸಿದ ಕೃತಿ ಇದು.
ಟಿಪ್ಪುವಿನ ಸ್ವಭಾವವನ್ನು ಅರಿತಿದ್ದ ತಂದೆ ಹೈದರ್ ಅಲಿ, ಆಡಳಿತದ ವಿಷಯಕ್ಕೆ ಬಂದಾಗ ‘ನೀನು ನಿನ್ನ ಅವಿವೇಕತನದಿಂದ ರಾಜ್ಯವನ್ನು ಕಳೆದುಕೊಳ್ಳುವೆ’ ಎಂದು ಪದೇ ಪದೆ ಎಚ್ಚರಿಸುತ್ತಿದ್ದನು. ಕೊನೆಗೂ ಹಾಗೇ ಆಯಿತು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ರಾ.ಹ.ದೇಶಪಾಂಡೆ ಎಂದೇ ಖ್ಯಾತಿಯ ರಾಮಚಂದ್ರ ಹಣಮಂತರಾಯ ದೇಶಪಾಂಡೆ ಅವರು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದವರು. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ! ನರೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. 1878ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಅವರು ಧಾರವಾಡಕ್ಕೆ ಪ್ರಥಮ ಹಾಗೂ ಮುಂಬೈ ವಿಭಾಗಕ್ಕೆ 21ನೆಯವರಾಗಿ ಉತ್ತೀರ್ಣರಾಗಿದ್ದರು. ವಿದ್ಯಾರ್ಥಿ ವೇತನ ಪಡೆದ ಅವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸೇರಿ ಇಂಟರ್ ಮೀಡಿಯೇಟ್ ನಲ್ಲಿ ಇಡೀ ಮುಂಬೈ ವಿ.ವಿ.ಗೆ 2ನೇ ಸ್ಥಾನ ಪಡೆದರು. 1882ರಲ್ಲಿ ಬಿ.ಎ. ಉಚ್ಛ ತರಗತಿಯಲ್ಲಿ ಪಾಸಾಗಿದ್ದಕ್ಕೆ ಮುಂಬೈ ಸರ್ಕಾರ ಮತ್ತೇ ...
READ MORE