ಕರ್ನಾಟಕದ ಜೈನ ಶಾಸನಗಳ ಕುರಿತ ಮಾಹಿತಿಯುಕ್ತ ಕೃತಿ 'ಕರ್ನಾಟಕದ ಜೈನ ಶಾಸನಗಳು ಸಂಪುಟ- 3'. ಜೈನಶಾಸನಗಳು ಛಾಯಾಚಿತ್ರಗಳು, ಶಾಸನಪಾಠಗಳು, ಪದಸೂಚಿ ಕುರಿತು ಮಾಹಿತಿ ಸಿಗುತ್ತದೆ. ಒಟ್ಟು ಕೃತಿಯು ಅಳಿಸಲಾಗದ ಲಿಪಿಯನ್ನು ಬರೆಯಬಾರದು, ನಿರ್ದೇಶಕರ ನುಡಿ, ಸಂಪಾದಕನ ಮಾತು, ಸಂಪುಟದ ಒಳಹೋಗುವ ಮುನ್ನ, ಸಂಕೇತ ಸೂಚಿ, ಗ್ರಾಮವಾರು ಸೂಚಿ, ರಾಜವಂಶೀಯ ಸೂಚಿ, ಶಾಸನಪಾಠ, ಪದಸೂಚಿ ಹಾಗೂ ಛಾಯಾಚಿತ್ರಗಳು ಮುಂತಾದ ಮಾಹಿತಿ ಈ ಕೃತಿಯಲ್ಲಿ ಸಿಗುತ್ತದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ಕನ್ನಡದ ಹಿರಿಯ ವಿದ್ವಾಂಸ ಡಾ. ದೇವರಕೊಂಡಾರೆಡ್ಡಿ ಅವರು ಶಾಸನ, ವಾಸ್ತುಶಿಲ್ಪ ಹಾಗೂ ಇತಿಹಾಸದಲ್ಲಿ ಪರಿಣಿತರು. ಮುನಿಸ್ವಾಮಿ ರೆಡ್ಡಿ ಹಾಗೂ ತಿಮ್ಮಕ್ಕ ದಂಪತಿಗಳ ಮಗನಾಗಿ ಬೆಂಗಳೂರಿನ ಅನೇಕಲ್ ತಾಲೂಕಿನ ವಣಕನಹಳ್ಳಿ ಅವರು 1948ರ ಮೇ 10ರಂದು ಜನಿಸಿದರು. 1971ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದ ಅವರು 1993 ರಲ್ಲಿ ತಲಕಾಡಿನ ಗಂಗರ ದೇವಾಲಯಗಳು ಒಂದು ಅಧ್ಯಯನ ಎಂಬ ವಿಷಯದ ಕುರಿತು ಪಿ.ಎಚ್.ಡಿ ಪದವಿ ಪಡೆದರು. ಆರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಿದ ಅವರು, ನಂತರ ಹಂಪಿ ...
READ MORE