ಕರ್ನಾಟಕದ ಸಮಗ್ರ ದಲಿತ ಚರಿತ್ರೆ

Author : ಎನ್. ಚಿನ್ನಸ್ವಾಮಿ ಸೋಸಲೆ

Pages 900

₹ 890.00




Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್, 15 ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 2216911

Synopsys

1900ರಿಂದ ಈವರೆಗಿನ ದಲಿತ ಚರಿತ್ರೆಯನ್ನು ಬಗೆಯುವ ಪ್ರಯತ್ನವನ್ನು ಈ ಕೃತಿ ಮಾಡಿದೆ. ಅಂದು ಇಂದಿನ ಕರ್ನಾಟಕದ ಭಾಗವೇ ಆಗಿದ್ದ ಮೈಸೂರು ಸಂಸ್ಥಾನ, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳ ದಲಿತ ಪ್ರಜ್ಞಾ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಕೃತಿಯಲ್ಲಿ ವಿವರಗಳನ್ನು ಒದಗಿಸಲಾಗಿದೆ.  ಕರ್ನಾಟಕದ ದಲಿತ ಚರಿತ್ರೆಗೆ ಪ್ರೇರಣೆ ನೀಡಿದ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡಿನ ದಲಿತ ಚರಿತ್ರೆಯೂ ಈ ಕೃತಿಯಲ್ಲಿ ಮಹತ್ವದ ದಾಖಲೆಗಳೊಂದಿಗೆ ಉಲ್ಲೇಖಗೊಂಡಿದೆ. ಈ ಬೃಹತ್ ಕೃತಿ ಎಂಟು ಭಾಗಗಳಾಗಿ ತೆರೆದುಕೊಳ್ಳುತ್ತದೆ. ಮೊದಲ ಭಾಗ ಮೈಸೂರು ಸಂಸ್ಥಾನದ ದಲಿತ ಚರಿತ್ರೆಯನ್ನು ಒಳಗೊಂಡಿದೆ. ಈ ಕಾಲಘಟ್ಟದಲ್ಲಿ ದಲಿತರ ಅಭಿವೃದ್ಧಿಗೆ ಪ್ರೇರಣೆಯಾದ ಘಟನೆಗಳ ವಿಶ್ಲೇಷಣೆ, ಬ್ರಾಹ್ಮಣೇತರ ಚಳವಳಿ, ಪಂಚಮರ ಆರ್. ಗೋಪಾಲಸ್ವಾಮಿ ಅವರ ಸಂವೇದನೆ, ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತರ ವಿವರ, ಆಧುನಿಕ ಮೈಸೂರು ಸಂಸ್ಥಾನದಲ್ಲಿ ಸಾಮಾಜಿಕ ಸುಧಾರಣಾ ಕಾನೂನುಗಳ ವಿವರಗಳು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದಲಿತರ ಸ್ಥಿತಿಗತಿಯನ್ನು ಈ ಭಾಗ ಒಳಗೊಂಡಿದ್ದು, ಬಹುತೇಕ ಲೇಖನಗಳನ್ನು  ಈ ಕೃತಿ ಒಳಗೊಂಡಿದೆ. ಕಾದಂಬರಿ, ಕಾವ್ಯ, ಕಥೆ, ನಾಟಕ, ಆತ್ಮಕಥೆ ಮೊದಲಾದ ಪ್ರಕಾರಗಳನ್ನು ಆರಿಸಿಕೊಳ್ಳಲಾಗಿದೆ. ಭಾಗ ಏಳರಲ್ಲಿ ಸಮಕಾಲೀನ ಕರ್ನಾಟಕದಲ್ಲಿ ದಲಿತರ ಬದುಕಿನ ಸಾಧಕ ಬಾಧಕಗಳ ಚಿತ್ರಣವಿದೆ. ಭಾಗ ಎಂಟರಲ್ಲಿ ಕರ್ನಾಟಕದ ನೆರೆ ರಾಜ್ಯಗಳಲ್ಲಿನ ದಲಿತ ಸಾಧಕರುಗಳ ಚರಿತ್ರೆಗಳನ್ನು ತೆರದಿಡಲಾಗಿದೆ. ನೂರಕ್ಕೂ ಹೆಚ್ಚು ಪರಾಮರ್ಶನ ಗ್ರಂಥಗಳಿಂದ ಮಾತ್ರವಲ್ಲದೆ ಒಂಬತ್ತಕ್ಕೂ ಹೆಚ್ಚು ನಿಯತಕಾಲಿಕೆಗಳಿಂದ ಮತ್ತು ಹತ್ತು ಹಲವು ದಿನಪತ್ರಿಕೆಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ಸಂಪಾದಕರು ಸಾಕಷ್ಟು ಶ್ರಮವಹಿಸಿರುವುದು, ಈ ಕೃತಿಯ ಪುಟ ಪುಟಗಳಲ್ಲೂ ವ್ಯಕ್ತವಾಗುತ್ತದೆ.

About the Author

ಎನ್. ಚಿನ್ನಸ್ವಾಮಿ ಸೋಸಲೆ
(20 May 1968)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು  ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು.  ನಮ್ಮ ಗ್ರಾಮಗಳು ಅಂದು ಇಂದು,  ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...

READ MORE

Related Books