ಕಾಂತಾವರದ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪ್ರಕಟವಾಗುತ್ತಿರುವ ಈ ಕೃತಿ ಮಂಗಳೂರಿನ ರಾಮಕೃಷ್ಣ ಮಠವನ್ನು ಪರಿಚಯಿಸುವ ಮೊದಲ ಕೃತಿ ಎನ್ನಬಹುದು. ಮಂಗಳೂರಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಜೊತೆಗೆ ಅದರ ಅಸ್ತಿತ್ವದ ಇತಿಹಾಸವನ್ನೂ ಸಾರ್ವಜನಿಕ ಕೈಂಕರ್ಯದಲ್ಲಿ ಮಠ ತೊಡಗಿಸಿಕೊಂಡ ಬಗೆಯನ್ನು ಲೇಖಕರು ದಾಖಲಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಮಂಗಳೂರು ನಗರದಲ್ಲಿ ಮಠವು ಸಮರೋಪಾದಿಯಲ್ಲಿ ನಡೆಸಿದ ಸ್ವಚ್ಛತಾ ಆಂದೋಲನದ ವಿವರವಾದ ಚಿತ್ರಣ, ರಾಮಕೃಷ್ಣ ಮಠದ ಕೇಂದ್ರಸ್ಥಾನವಾದ ಕೋಲಕತ್ತೆಯ ಕೇಂದ್ರ ಮಠದ ಉಗಮ ಮತ್ತು ಬೆಳವಣಿಗೆ, ಮಠದ ಉದ್ದೇಶ ಆಧ್ಯಾತ್ಮಿಕ ಸಂದೇಶಗಳನ್ನು ತಂದಿರುವ ಕಾರಣ ರಾಮಕೃಷ್ಣ ಮಠದ ಅರ್ಥವ್ಯಾಪಿ ಹಿಗ್ಗಿದೆ. ದೇಶಪಾಂಡೆಯವರು ಪ್ರೀತಿ ಮತ್ತು ಗೌರವ ಗಳೊಂದಿಗೆ ವಿಷಯ ಮಂಡನೆ ಮಾಡುತ್ತಾರೆ. ಈ ಕಾರಣದಿಂದಾಗಿ ಅವರ ಭಾಷೆಯಲ್ಲೂ ವಿಷಯದಷ್ಟೇ ಉದಾರತೆ ಮೇಲೈಸಿದೆ. ಮಂಗಳೂರು ನಗರದ ಆಶ್ರಮವೊಂದರ ಐತಿಹಾಸಿಕ ದಾಖಲೆಯಾಗಿ ಕೃತಿ ಮುಖ್ಯವಾಗುತ್ತದೆ. 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ 201ನೇ ಪುಸ್ತಕ.
©2024 Book Brahma Private Limited.