ಆನೇಕಲ್ ತಾಲೂಕಿನ ಪ್ರಾಚೀನ ಇತಿಹಾಸವನ್ನು ಚಿತ್ರಿಸುವ ಕೃತಿ-ಆನೆನಾಡು. ಲೇಖಕ ಡಾ. ಪಿ.ವಿ.ಕೃಷ್ಣಮೂರ್ತಿ ಅವರು ಆನೇಕಲ್ ತಾಲೂಕು ಪ್ರಾಗೈತಿಹಾಸಿಕ, ಗಂಗ, ಚೋಳ, ಹೊಯ್ಸಳ, ಕರ್ಕಡ ಮಾರಾಯರು (ಪೂರ್ವಾದಿರಾಯರು), ವಿಜಯನಗರ, ಪಾಳೆಯಗಾರರು (ಸುಗುಟೂರು ಪ್ರಭುಗಳು), ಹೈದರ್, ಟಿಪ್ಪೂ, ಮೈಸೂರು ಒಡೆಯರ ಆಳ್ವಿಕೆಯವರೆಗೆ ಶಾಸನಗಳ ಆಧಾರದಿಂದ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಬನ್ನೇರುಘಟ್ಟ ಕ್ಷೇತ್ರದ ಬಗ್ಗೆ ಹಾಗೂ ಆನೇಕಲ್ ತಾಲ್ಲೂಕಿನ ಪ್ರಾಚೀನ ಮತ್ತು ಅರ್ವಾಚೀನ ಕಾಲದ ಕವಿ, ಸಾಹಿತಿ, ಬರಹಗಾರರ ಸಂಕ್ಷಿಪ್ತ ಪರಿಚಯವನ್ನುಈ ಕೃತಿ ಒಳಗೊಂಡಿದೆ. ,
ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...
READ MORE