About the Author

ಲೇಖಕ ರಾಜೇಶ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದವರು. ಉಡುಪಿಯಲ್ಲಿ ಪದವಿ ಪೂರ್ವ ಶಿಕ್ಷಣ,  ಉಡುಪಿ ಜಿಲ್ಲೆಯ ನಿಟ್ಟೆಯ ಡಾ.ಎನ್ ಎಸ್ ಎ ಎಂ ಪ್ರಥಮ ದರ್ಜೆ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದರು. ಬೆಳಗಾವಿಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಎಜ್ಯುಕೇಶನ್ & ರಿಸರ್ಚ್‍ನಲ್ಲಿ ಎಂಬಿಎ ಪದವಿ ಪಡೆದು, 1998ರಲ್ಲಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ನಂತರ, 2000ರಲ್ಲಿ ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದಕ್ಕೆ ಸೇರಿದರು. 2013ರಿಂದ ’ಬ್ರಾಂಡಿಂಗ್ ಹಾಗೂ ಎಡ್ವರ್ಟೈಸಿಂಗ್’ ಸೇವೆ ನೀಡುವ ಕನ್ಸಲ್ಟನ್ಸಿಯನ್ನು ಉಡುಪಿಯಲ್ಲಿ ಆರಂಭಿಸಿ, ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ. ಇತಿಹಾಸ, ಪ್ರಾಚೀನ ದೇವಾಲಯಗಳು, ಚಾರಣ ಮತ್ತು ಪ್ರಯಾಣ ಇವರ ಹವ್ಯಾಸ.ಗಳು.

  ಕೃತಿಗಳು: ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು’ (ಒಟ್ಟು ಏಳು ಸರಣಿ ಪುಸ್ತಕಗಳು) 

ರಾಜೇಶ್ ನಾಯ್ಕ