ಸಾಗರದ ಲೇಖಕಿ ಸಹನಾ ಪಿ. ಜಿ ಅವರ ’ಶ್ರೀ ಮಹಾಗಣಪತಿ ದೇವಾಲಯ ಮೇಲಿನ ಇತಿಹಾಸ’ ಎನ್ನುವ ಪುಸ್ತಕವನ್ನು ಸಂಪಾದಿಸಿದ್ದಾರೆ. ಲೇಖಕಿ ’ಪಳಿದ್ಯ’ ಎಂಬ ಮನೆತನಕ್ಕೆ ಸೇರಿದವರು. ಮಲೆನಾಡಿನ ಖಾದ್ಯಗಳಲ್ಲೊಂದಾದ ಮಜ್ಜಿಗೆಹುಳಿಗೆ ’ಪಳಿದ್ಯ’ ಎಂದು ಕರೆಯುತ್ತಾರೆ. ಕೆಳದಿ ಅರಸರ ಕುಟುಂಬದವರು ತಯಾರಿಸಿದ್ದ ಪಳಿದ್ಯದ ವಿಶೇಷತೆಗೆ ಭೂಮಿಯನ್ನೇ ಉಂಬಳಿಯಾಗಿ ನೀಡಿ ಗೌರವಿಸಿದ ಶಾಸನವೊಂದನ್ನು ಡಾ. ಕೆಳದಿ ವೆಂಕಟೇಶ ಜೋಯ್ಸ್ ದಾಖಲಿಸಿದ್ದಾರೆ. ಕೆಳದಿ ಅರಸರು ಗಣಪತಿ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದ ಪರಂಪರೆ ಮತ್ತು ಅರ್ಚಕ ಮನೆತನದ ಶ್ರೇಷ್ಠತೆಯನ್ನು ಡಾ. ಗುಂಡಾ ಜೋಯ್ಸ್ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಇತಿಹಾಸವನ್ನು ಹೇಳುವುದರ ಜೊತೆಯಲ್ಲಿ ಈ ಪುಸ್ತಕ ಲೇಖಕಿಯ ಪೂರ್ವಜರ ಕಥೆಗಳನ್ನೂ ತೆರೆದಿಡುತ್ತದೆ. ನಾಡಿನ ಹೆಸರಾಂತ ಇತಿಹಾಸಕಾರರು, ಲೇಖಕರು , ಊರಿನ ಶ್ರಮಜೀವಿಗಳು ಈ ಪುಸ್ತಕದಲ್ಲಿ ಲೇಖನಗಳ ಮೂಲಕ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಸಾಗರದ ಐತಿಹ್ಯವನ್ನು ತಿಳಿಸುವ ಪುಸ್ತಕವೊಂದನ್ನು ಪ್ರಥಮವಾಗಿ ಹೊರತಂದಿದ್ದಾರೆ.

©2024 Book Brahma Private Limited.