ವಿಜಯನಗರ ಸಾಮ್ರಾಜ್ಯದ ಕೃಷ್ಣದೇರಾಯನು ಬರೆಯಿಸಿದ ಶಾಸನಗಳು ಅನೇಕ. ಇವು ಅಂದಿನ ಜನಜೀವನ, ಸಾಮಾಜಿಕ, ಆರ್ಥಿಕ ಸ್ಥಾನಮಾನ, ಆಡಳಿತ ವ್ಯವಸ್ಥೆ, ಸಂಸ್ಕೃತಿ ಇತ್ಯಾದಿ ತಿಳಿಯಲು ಸಹಕಾರಿ. ಈ ನಿಟ್ಟಿನಲ್ಲಿ, ಲೇಖಕರು ಯತ್ನಿಸಿದ್ದರ ಫಲವಾಗಿ ’ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು’ ಕೃತಿ ಪ್ರಕಟಗೊಂಡಿದೆ.
ಬರಹಗಾರ ಗುರುಮೂರ್ತಿ ಪೆಂಡಕೂರು ಅವರು ಜನಿಸಿದ್ದು 1938 ಜೂನ್ 9ರಂದು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಬರಹಗಾರರು. ಸಾಹಿತ್ಯ ಪ್ರಿಯರಾಗಿದ್ದ ಇವರ ಹುಟ್ಟೂರು ಬಳ್ಳಾರಿ ಜಿಲ್ಲೆ ದೇವರಕೆರೆ. ತಾಯಿ ರಾಮಕ್ಕ, ತಂದೆ ವಿರೂಪಣ್ಣ. ಬಳ್ಳಾರಿಯಲ್ಲಿ ಪ್ರೌಢಶಾಲೆ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರವಾಸಿ ಪ್ರಿಯರಾಗಿರುವ ಇವರು ವಿಶ್ವದ ಹಲವಾರು ದೇಶಗಳನ್ನು ಸುತ್ತಿದ್ದಾರೆ. ಗುರುಮೂರ್ತಿ ಅವರ ಪ್ರಮುಖ ಕೃತಿಗಳೆಂದರೆ ಬಹುರೂಪಿ ವಸುಂಧರಾ, ಆಂಧ್ರ ಪ್ರಪಂಚ, ಅಮರನಾಥ ಪ್ರವಾಸ, ಥಾಯ್‌ಲ್ಯಾಂಡ್-ಇಂಡೋನೇಷಿಯಾ ತಿರುಗಾಟ, ಓ ! ಕೆನಡಾ, ಅವಕಾಶಗಳ ...
READ MORE