ಸುಗುಟೂರು ವೀರಶೈವ ಅರಸು ಮನೆತನ- ಲೇಖಕ ಡಾ. ಪಿ.ವಿ.ಕೃಷ್ಣಮೂರ್ತಿ ಅವರ ಐತಿಹಾಸಿಕ ಸಂಶೋಧನಾ ಕೃತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 15ನೆಯ ಮೃತ್ಯುಂಜಯ ವಿಶೇಷ ವ್ಯಾಖ್ಯಾನಮಾಲೆಯಲ್ಲಿ (1994 ಜನೆವರಿ 27 ಮತ್ತು 28 ) ಲೇಖಕರು ನೀಡಿದ ಮೂರು ವಿಶೇಷ ಉಪನ್ಯಾಸಗಳ ಲಿಖಿತ ರೂಪವೇ ಈ ಕೃತಿ.
ಇತಿಹಾಸ ಸಂಶೋಧಕರು ಉಪೇಕ್ಷಿತ ಅರಸುಮನೆತನಗಳ ಕುರಿತು ಅವರು ನಡೆಸಿದ ಸಂಶೋಧನೆ, ಪ್ರಕಟಿಸಿದ ಲೇಖನಗಳು ಇತಿಹಾಸಜ್ಞರ ಗಮನ ಸೆಳೆದಿವೆ. "ಸುಗುಟೂರು ವೀರಶೈವ ಅರಸು ಮನೆತನ".ಎಂಬುದು ಅಂಥ ಒಂದು ಅಲಕ್ಷಿತ ಅರಸುಮನೆತನವಾಗಿದೆ, ವ್ಯಾಪಕವಾದ ಕ್ಷೇತ್ರಕಾರ್ಯ, ಉತ್ಕಟವಾದ ಶ್ರದ್ಧೆ - ಶ್ರಮಗಳಿಂದ ಸಿದ್ಧಪಡಿಸಿದ ಈ ಪ್ರಬಂಧ ಈ ಅರಸುಮನೆತನದ ಬಗೆಗೆ ಪ್ರಥಮವಾಗಿ ಅನೇಕ ಹೊಸ ಸಂಗತಿಗಳನ್ನು ಬೆಳಕಿಗೆ ತಂದಿದೆ.
ಶಾಸನ, ಕಾವ್ಯ, ಐತಿಹ್ಯ ಮೊದಲಾದ ಆಕರ ಸಾಮಗ್ರಿಗಳ ಹಿನ್ನೆಲೆಯಲ್ಲಿ ಈ ಅರಸುಮನೆತನದ ಸಮಗ್ರ ಚರಿತ್ರೆಯನ್ನು ಮೊದಲಬಾರಿಗೆ ರಚಿಸಿಕೊಟ್ಟ ಕೀರ್ತಿ ಇವರದು. ಅಧ್ಯಯನದ ಆಕರಗಳು, ಪ್ರಾದೇಶಿಕ ವ್ಯಾಪ್ತಿ, ಚಾರಿತ್ರಿಕ ಹಿನ್ನೆಲೆ , ವಂಶದ ಮೂಲ ಮತ್ತು ಮೂಲಪುರುಷ, ಅರಸರು ಹಾಗೂ ಪುಂಗನೂರು ಸಂಸ್ಥಾನದ ಪ್ರಭುಗಳ ಬಗ್ಗೆ, ಆಡಳಿತ ವಿಭಾಗಗಳು, ಆಡಳಿತ ಕ್ರಮ, ದೇವಾಲಯಗಳ ರಚನೆ, ಜೀರ್ಣೋದ್ದಾರ, ಪೂಜಾಕೈಂಕರ್ಯ, ಮಠಮಾನ್ಯಗಳು, ಅಗ್ರಹಾರಗಳು, ಯಜ್ಞ ಯಾಗಾದಿಗಳು ಅಲ್ಲದೆ ಅವರ ಎಲ್ಲ ಶಾಸನಗಳನ್ನು ಇಲ್ಲಿ ಸಂಪಾದಿಸಿ ಕೊಡಲಾಗಿದೆ.
©2024 Book Brahma Private Limited.