ಮೈಸೂರು ಹುಲಿ ಎಂದೇ ಐತಿಹಾಸಿಕವಾಗಿ ಖ್ಯಾತಿ ಪಡೆದಿದ್ದ ಟಿಪ್ಪು ಸುಲ್ತಾನ್ ಆಡಳಿತ ಕುರಿತು ವಿಶೇಷವಾಗಿ ಆತ ಹಿಂದೂ ವಿರೋಧಿ-ಪರ ಎಂಬ ವಿಷಯ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ತಮ್ಮ ವಾದಗಳಿಗೆ ಐತಿಹಾಸಿಕ ಸಮರ್ಥನೆಗಳನ್ನೂ ಪೂರೈಸಿದ್ದಾರೆ. ಈ ಮಧ್ಯೆ, ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆಯನ್ನು ಕಾಯ್ದುಕೊಂಡಿದ್ದ ಎಂಬುದರ ಸಮರ್ಥನೆಯಾಗಿ ವಿವಿಧ ಲೇಖಕರು ಬರೆದ ಬರಹಗಳನ್ನು ಲೇಖಕ ಕುಮಾರ್ ಬುರಡಿಕಟ್ಟಿ ಅವರು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಹುಲಿಯ ಜಾಡು ಹಿಡಿದು. ಕೋಮು ಸಾಮರಸ್ಯವನ್ನು ಕದಡುವ ಒಂದೇ ಉದ್ದೇಶದಿಂದ ಕೆಲವು ಕೋಮುವಾದಿಗಳು ಟಿಪ್ಪು ಕುರಿತು ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವುಗಳಿಗೆ ಐತಿಹಾಸಿಕ ಪುರಾವೆಗಳಿಲ್ಲ ಎಂಬ ನಿಟ್ಟಿನಲ್ಲಿ ವಿಚಾರಗಳು ಮೈದಳೆದಿರುವ ಇಲ್ಲಿಯ ಲೇಖನಗಳು, ಐತಿಹಾಸಿಕವಾಗಿ ಸಾಕಷ್ಟು ಸಮರ್ಥನೆಗಳನ್ನು ಒದಗಿಸುತ್ತವೆ. ಟಿಪ್ಪು ಕುರಿತ ಸಂಶೋಧನೆಯ ಅಧ್ಯಯನಗಳಿಗೆ ಈ ಗ್ರಂಥವು ಉತ್ತಮ ಆಕರವಾಗಲಿದೆ.
ಪತ್ರಕರ್ತ, ಬರಹಗಾರ ಕುಮಾರ ಬುರಡಿಕಟ್ಟಿ ಅವರು 1978 ಏಪ್ರಿಲ್ 7ರಂದು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಡೆನಂದಿಹಳ್ಳಿ ಇವರ ಹುಟ್ಟೂರು. ಪ್ರಾಥಮಿಕ- ಪ್ರೌಢಶಿಕ್ಷಣವನ್ನು ಕಡೇನಂದಿಹಳ್ಳಿ ಮತ್ತು ಹಿರೇಕೇರೂರಿನಲ್ಲಿ ಪಡೆದರು. ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ. ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಚಳವಳಿಗಳಲ್ಲಿ ಭಾಗಿಯಾಗುತ್ತ ಬಂದಿರುವ ಕುಮಾರ ಅವರು ದೆಹಲಿ, ಮುಂಬೈಗಳಲ್ಲಿ ನೆಲೆಸಿದ್ದರು. 2002ರ ಗುಜರಾತ್ ನರಮೇಧ, ಹರಿಯಾಣದ ಜಝಾರ್‌ನಲ್ಲಿ ನಡೆದ ದಲಿತರ ಮಾರಣಹೋಮ ಮುಂತಾದ ಘಟನೆಗಳ ಬಗ್ಗೆ ರಾಷ್ಟ್ರಮಟ್ಟದ ಸತ್ಯಶೋಧನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಲಕಾಲ ಲಂಕೇಶ್ ವಾರಪತ್ರಿಕೆಯಲ್ಲಿ, ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸದ್ಯ ಕಲಬುರಗಿಯಲ್ಲಿ ದ ...
READ MORE