ಕನ್ನಡದಲ್ಲಿ ಇದುವರೆಗೆ ನಾಯಕ ಅರಸುಮನೆತನದ ಕುರಿತಂತೆ ಅಧ್ಯಯನಗಳು ಅಷ್ಟಾಗಿ ಆಗಿಲ್ಲ , ಅಂತಹ ಕೊರತೆಯನ್ನು ಈ ಕೃತಿ ತುಂಬಿದೆ ಎನ್ನಬಹುದು ಈ ಕೃತಿಯಿಂದ ಅಂದರೆ ಸೂಕ್ಷ್ಮ ಅಧ್ಯಯನಗಳಿಂದ ಪ್ರಾದೇಶಿಕ ಹಾಗೂ ಸ್ಥಳೀಯ ಚಿಕ್ಕಪುಟ್ಟ ನಾಯಕರ ಅಥವಾ ಸಾಮಂತರ ಹಾಗೂ ಸಣ್ಣ ಆಡಳಿತ ಘಟಕಗಳ ಸಂಕೀರ್ಣ ಸಂಬಂಧವನ್ನು ಅರಿಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ವಿದ್ವತ್‌ಪೂರ್ಣವಾಗಿ ಸಮತೋಲನ ದೃಷ್ಠಿಯಿಂದ ರಚಿತವಾಗಿದ್ದು ನಾಯಕ ಅರಸು ಮನೆತನಗಳ ಕುರಿತ ಹಲವಾರು ಅಧ್ಯಯನಗಳ ಅಭಿಪ್ರಾಯಗಳನ್ನು ಹಾಗೂ ಚರ್ಚೆಗಳನ್ನು ಅಳವಡಿಕೊಂಡಿರುವುದರಿಂದ ಒಂದು ಸ್ವಾಗತಾರ್ಹ ಕೊಡುಗೆ ಆಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರಾಗಿರುವ ಅಮರೇಶ ಯತಗಲ್ ಅವರು ರಾಯಚೂರು ಜಿಲ್ಲೆಯ ಯತಗಲ್ ನವರು. ಸುರಪುರ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಇತಿಹಾಸ ಬರವಣಿಗೆಯಲ್ಲಿ ಆಸಕ್ತರಾಗಿದ್ದಾರೆ. ...
READ MORE