ಮೈಸೂರು ಸಂಸ್ಥಾನವು ಬ್ರಿಟಿಷರ ನೇರ ಆಳ್ವಿಕೆಯ 1831ರಿಂದ 1881ರ ನಡುವಿನ ಅವಧಿಯಲ್ಲಿ ಕಮೀಷನರುಗಳ ಆಳ್ವಿಕೆಯ ಕುರಿತ ವಿವರ ನೀಡುವ ಪುಸ್ತಕ. 1881ರಿಂದ 1947ರ ಕಾಲಾವಧಿಯಲ್ಲಿ ಬ್ರಿಟಿಷರ ಹಿಡಿತ ಇದ್ದರೂ ಮೈಸೂರಿನ ಮಹಾರಾಜರು ಮತ್ತು ದಿವಾನರು ಮೈಸೂರು ಸಂಸ್ಥಾನವನ್ನು ಪ್ರಗತಿ ಪಥದೆಡೆಗೆ ತೆಗೆದುಕೊಂಡು ಹೋದ ಚಿತ್ರಣ ನೀಡುತ್ತದೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. ನಮ್ಮ ಗ್ರಾಮಗಳು ಅಂದು ಇಂದು, ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...
READ MORE