ಹೈದರಾಬಾದ್ ಕರ್ನಾಟಕದ ಐತಿಹಾಸಿಕ ಕಥನ ಗ್ರಂಥವು ಇಡಿ ಕಲ್ಯಾಣ ಕರ್ನಾಟಕದ ಶ್ರೀಮಂತ ಇತಿಹಾಸವನ್ನು ನೀಡುತ್ತದೆ. ಬೌದ್ಧ ನೆಲೆಗಳು. ಬಂದೇ ನವಾಜ್ ,ಹೈದರಾಬಾದ್ ಕರ್ನಾಟಕದ ವಿಮೋಚನೆ, ಹೈದರಾಬಾದ್ ಕರ್ನಾಟಕದ ಸೂಫಿ ಪರಂಪರೆ, ಪಂಡಿತ ತಾರಾನಾಥರು,ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳು, ಕಲ್ಯಾಣದ ಚಾಲುಕ್ಯರ ನಾಣ್ಯಗಳು ಹೀಗೆ ಅನೇಕ ವಿಷಯಗಳನ್ನು ಒಳಗೊಂಡಿದೆ.
ಗಾಂಧೀಜಿ ಸಿ ಮೊಳಕೇರೆ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೋನಮೇಳಕುಂದಾ ಗ್ರಾಮದವರು. (ಜನನ: 02-07-1977) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿ ಪದವಿ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಭಾಲ್ಕಿಯಲ್ಲಿ ಪದವಿ ಪೂರ್ಣಗೊಳಿಸಿದರು. ಬಿ ಇಡಿ ಮೈಸೂರು ವಿಶ್ವವಿದ್ಯಾಲಯದಿಂದ ಹಾಗೂ ಎಂ ಎ ಇತಿಹಾಸ , ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯ 2003ರಲ್ಲಿ ಪಡೆದರು. ಪಿ.ಎಚ್.ಡಿ 2007ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರಗಿಯಿಂದ ಪಡೆದರು. ಪಿ.ಡಿ.ಎಫ್ ಯುಜಿಸಿಯಿಂದ ಪಡೆದರು. ಪ್ರಸ್ತುತ ಕಲಬುರಗಿಯ ಡಾ ಅಂಬೇಡ್ಕರ ಪದವಿ ಮಹಾವಿದ್ಯಾಲಯಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೀದರ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಹಾಗೂ ...
READ MORE