‘ಸುರಪುರ ಒಂದು ಪ್ರಾಚೀನ ಬೇಡರ ರಾಜ್ಯ’ ಕೃತಿಯು ರಂಗನಗೌಡ ಹೆಚ್. ಪಾಟೀಲ ಅವರ ಅನುವಾದಿತ ಕೃತಿ. ಫ್ರಾಮುರ್ಜ ಜಂಗ್ ಈ ಕೃತಿಯ ಮೂಲ ಕರ್ತೃ . ಕೃತಿಯ ಕುರಿತು ಬರೆದ ಚಿಂತಕ ಸಿ.ಎನ್. ಭಂಡಾರೆ ಅವರು, ‘ಬ್ರಿಟಿಷರ ಮತ್ತೆ ಸುರಪುರ ಸಂಸ್ಥಾನ ನಡುವೆ 1858ರಲ್ಲಿ ನಡೆದ ಭೀಕರ ಕಾಳಗ ನಮ್ಮ ಊರಾದ ರುಕ್ಮಾಪುರ ಹತ್ತಿರವೆ ನಡೆದಿತ್ತು. ಅಲ್ಲಿನ ವಿಚಾರಗಳ ಕುರಿತ ಸಮಗ್ರ ಮಾಹಿತಿಯನ್ನು ನಾವು ಈ ಕೃತಿಯಲ್ಲಿ ಕಾಣಬಹುದು. ಫ್ರಾ ಮುರ್ಜ ಜಂಗ್ ಅವರು ರಚಿಸಿದ ಈ ಕೃತಿಯು ಸಂಸ್ಥಾನದ ಇತಿಹಾಸದ ಮೊದಲ ಸ್ವತಂತ್ರ ಕೃತಿಯೆನ್ನಬಹದು. ಸುಮಾರು ನೂರು ವರ್ಷಗಳ ಹಿಂದೆಯೇ ಈ ಕೃತಿ ಇಂಗ್ಲಿಷಿನಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ನವಾಬ ಫ್ರಾ ಮುರ್ಜ ಜಂಗ್ ಅವರು ವಿವಿಧ ಆಕರಗಳನ್ನು ಈ ಕೃತಿಯನ್ನು ರಚಿಸಿದ್ದಾರೆ. ಸುರಪುರದವರೆ ಆದ ಇತಿಹಾಸಕಾರ ಕಪಟರಾಳ ಕೃಷ್ಣರಾಯ 1977ರಲ್ಲಿ ಪ್ರಕಟಿಸಿದ ಸುರಪುರ ಸಂಸ್ಥಾನ ಕೃತಿಯು ಸಂಸ್ಥಾನದ ಚರಿತ್ರೆಯನ್ನು ಕಟ್ಟಿಕೊಡುವ ಗ್ರಂಥವಾಗಿದೆ ಎಂದಿದ್ದಾರೆ. ಸುರಪುರ ಸಂಸ್ಥಾನಗಳನ್ನು ಅಧ್ಯಯನ ನಡೆಸಲು ಇರುವ ಆಕರಗಳು ಮೂರು ವಿಧದವು ಎಂಬುದನ್ನು ಲೇಖಕ ಇಲ್ಲಿ ಉಲ್ಲೇಖಿಸಿದ್ದಾರೆ. ಸಮಕಾಲೀನ ಕಾವ್ಯಗಳು, ವಂಶಾವಳಿಗಳು ಇನ್ನಿತರ ದಾಖಲೆಗಳು; ಇಂಗ್ಲಿಷರ ಪ್ರವೇಶಾನಂತರದಲ್ಲಿ ಸೃಷ್ಟಿಗೊಂಡ ಇಂಗ್ಲಿಷ್ ನಲ್ಲಿರುವ ಪತ್ರವ್ಯವಹಾರಗಳು ಮತ್ತು ಕೃತಿಗಳು; ಹಾಗೂ 1900 ರಿಂದ 2016ರ ವರೆಗಿನ ಅಧ್ಯಯನ ಕೃತಿಗಳು, ಸಂಗ್ರಹಕೃತಿಗಳು, ಸಂಪ್ರಬಂಧಗಳು ಇತ್ಯಾದಿ ಇಲ್ಲಿ ಕಾಣಬಹದು. ಜನಪದ ಸಾಹಿತ್ಯವನ್ನು ಇಲ್ಲಿ ಪ್ರತ್ಯೇಕವಾಗಿ ಗಮನಿಸಬಹುದು. ಕನ್ನಡ ಮಾತ್ರವಲ್ಲದೆ, ಸಂಸ್ಕೃತ, ತೆಲುಗು, ಉರ್ದು, ಫಾರಸೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಇತಿಹಾಸ ಕುರಿತ ಬರಹಗಳಿವೆಂಬುದನ್ನು ಗಮನಿಸಿದರೆ ಈ ಸಂಸ್ಥಾನದ ಕೀರ್ತಿ-ಪ್ರತಾಪ ಪ್ರಭಾವಗಳು ಎದ್ದುತೋರುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.