ಕರ್ನಾಟಕ ಚರಿತ್ರೆಯನ್ನು ಪುನಾರಚಿಸಿರುವ, ಪುನರ್‌ವಿಮರ್ಶಿಸುವ ಸಾಧ್ಯತೆಗಳಿಗೆ ವಿಜಯ್ ಪೂಣಚ್ಚ ತಂಬಂಡ ಅವರು ಸಂಪಾದಿಸಿ, ಪ್ರಸ್ತಾವನೆಯನ್ನು ಬರೆದಿರುವ ಕೃತಿಯೇ ’ಹಾಲೇರಿ ಅರಸ ವೀರರಾಜೇಂದ್ರ ಒಡೆಯರ್ ಅವರು ಬರೆಯಿಸಿದ ರಾಜೇಂದ್ರನಾಮೆ ಮರು ಓದು’.
1807ರಲ್ಲಿ ರಚನೆಗೊಂಡು 1857ರಲ್ಲಿ ಪ್ರಕಟಗೊಂಡ ರಾಜೇಂದ್ರನಾಮೆ ಮೂಲಪ್ರತಿಯ ಪ್ರತಿ ಪುಟಕ್ಕೂ ಪೂಣಚ್ಚ ಅವರು ಟಿಪ್ಪಣಿಯನ್ನು ಬರೆದಿರುವುದರಿಂದ 19ನೇ ಶತಮಾನದ ಮೊದಲ ದಶಕದಲ್ಲಿ ಹೊರಬಂದ ಈ ಕೃತಿಯನ್ನು ಭೂತ ಹಾಗೂ ವರ್ತಮಾನಗಳ ನಡುವಿನ ಸಂವಾದದಂತೆ ಚರ್ಚಿಸಬಹುದಾಗಿದೆ. ಮೈಸೂರು, ಇಕ್ಕೇರಿ, ಸ್ವಾದೆ, ಬೇಲೂರು, ಮಲೆಯಾಳಿ ರಾಜ್ಯಗಳಾದ ಬೆರಕಲ್ ಮತ್ತು ಕೋಟೆ ರಾಜ್ಯಗಳ ರಾಜಕೀಯ ಸಂಬಂಧಗಳನ್ನು ಚರ್ಚಿಸುವುದರೊಂದಿಗೆ ಮರಾಠರ, ನಿಜಾಮರ, ಪೋರ್ಚುಗೀಸರ, ಫ್ರೆಂಚರ ಮತ್ತು ಇಂಗ್ಲಿಷರ ರಾಜಕೀಯ ಪಗಡೆಯಾಟಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
©2024 Book Brahma Private Limited.