ಕನ್ನಡ ವಿಶ್ವವಿದ್ಯಾಲಯವು ವಾಲ್ಮೀಕಿ ಅಧ್ಯಯನ ಪೀಠದಡಿ 2012ರ ಮಾರ್ಚ್ 13 ರಿಂದ ಎರಡು ದಿನ ಕಾಲ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳ ಸಂಗ್ರಹವೇ ’ಕನಕಗಿರಿ ನಾಯಕರು’ . ಕನಕಗಿರಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವ, ರಾಜರ ಆಳ್ವಿಕೆ, ಯುದ್ಧಗಳು, ಕದನ ಕಲಿಗಳ ಸಾಹಸ, ಕನಕಗಿರಿಯ ವೈಭವದ ವಾಸ್ತುಶಿಲ್ಪ, ಕೆರೆ, ಬಾವಿ, ದೇವಾಲಯಗಳು, ಕನಕಗಿರಿ ನಾಯಕರ ಬೇಟೆಯ ವಿಶೇಷತೆ ಇತ್ಯಾದಿಗಳನ್ನು ಹಾಗೂ ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲೇ ಕನಕಗಿರಿ ನಾಯಕರು ಒಂದು ಸಂಸ್ಥಾನವನ್ನು ಕಟ್ಟಿ ಬೆಳೆಸಿದ ಕುತೂಹಲಕಾರಿ ಐತಿಹಾಸಿಕ ಸಂಗತಿಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.