ಕರ್ನಾಟಕದಲ್ಲಿ ಜರುಗಿದ ಅನೇಕ ಸಶಸ್ತ್ರ ದಂಗೆಗಳ, ಇದುವರೆಗೂ ದಾಖಲಾಗದೇ ಉಳಿದ ಚರಿತ್ರೆಯನ್ನು ಬೆಳಕಿಗೆ ತಂದಿರುವ ಮಹತ್ವದ ಕೃತಿ ಇದು. ಕ್ರಿ.ಶ. 1820ರಿಂದ 1948ರ ವರೆಗಿನ ಕಾಲಾವಧಿಯನ್ನು ಆಧರಿಸಿ ಬೀದರ್ ಜಿಲ್ಲೆ ಮರಾಠವಾಡಾ ಹಾಗೂ ತೆಲಂಗಾಣದ ಕೆಲ ಭಾಗವನ್ನು ಅನುಲಕ್ಷಿಸಿ ಅಧ್ಯಯನ ನಡೆದಿದೆ.
ಬ್ರಿಟಿಷ್ ವಿರೋಧಿ ಮತ್ತು ನಿಜಾಂ ಸಂಸ್ಥಾನದ ಮತೀಯ ದೌರ್ಜನ್ಯಗಳ ವಿರುದ್ಧ ಬೀದರ್ ಜನರು ನಡೆಸಿದ ಹೋರಾಟದ ವಿವರಗಳೂ ಇಲ್ಲಿವೆ. ಜೊತೆಗೆ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹೈದರಾಬಾದ್ ಕರ್ನಾಟಕದ ಕೊಡುಗೆಯನ್ನು ಒತ್ತಿ ಹೇಳಲಾಗಿದೆ. ದೇಶ ವಿಮೋಚನೆಗಾಗಿ ಮಹಿಳೆಯರು ವಹಿಸಿದ ಪಾತ್ರದ ಚಿತ್ರಣವೂ ಲಭ್ಯ.
“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್; ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...
READ MORE