‘ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು’ ಕೃತಿಯು ಚನ್ನಬಸವಯ್ಯ ಹೀರೆಮಠ ಅವರ ಚರಿತ್ರೆಯ ಗ್ರಂಥವಾಗಿದೆ. ಪ್ರಾಚೀನ ಕರ್ನಾಟಕದ ಚರಿತ್ರೆಯೆಂದರೆ ದಕ್ಷಿಣ ಭಾರತದ ಚರಿತ್ರೆಯೇ ಆಗಿದೆ. ಶಾಸನಗಳು ಕರ್ನಾಟಕವನ್ನು ' ಕುಂತಲನಾಡು ' ಎಂದು ಕರೆದಿವೆ. ಈ ನಾಡಿನ ವ್ಯಾಪ್ತಿಯು ಉತ್ತರದಲ್ಲಿ ನರ್ಮದಾ ನದಿಯಿಂದ ದಕ್ಷಿಣದಲ್ಲಿ ಕಾವೇರಿಯವರೆಗೆ ವಿಸ್ತರಿಸಿತ್ತು. ಇದರಲ್ಲಿ ಸಪ್ತಾರ್ಧಲಕ್ಷ ಹಳ್ಳಿಗಳಿದ್ದವೆಂದು ಶಾಸನಗಳು ಒಕ್ಕೊರಲಿನಿಂದ ಸಾರಿವೆ. ಈ ಹಳ್ಳಿಗಳ ವಿವರ ಮತ್ತು ಅವು ಸಮಾವೇಶಗೊಂಡಿದ್ದ ಪ್ರಧಾನ ವಿಭಾಗಗಳನ್ನು ಆಧಾರಸಹಿತವಾಗಿ ಇಲ್ಲಿ ದಾಖಲಿಸಲಾಗಿದೆ. ಚರಿತ್ರೆಯನ್ನು ಅರಿಯಲು ಶಾಸನಗಳು ಮುಖ್ಯ ಆಕರ. ಅವುಗಳ ಸಹಾಯದಿಂದ ಅಂದಿನ ಸಂಸ್ಕೃತಿಯ ಸ್ಪಷ್ಟ ಚಿತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಸಾಮಾಜಿಕ, ಶೈಕ್ಷಣಿಕ ಮಾಹಿತಿಗಳಂತೆ ಆಡಳಿತದ ಹಲವು ವಿವರಗಳೂ ಈ ಕೃತಿಯಲ್ಲಿವೆ..
©2024 Book Brahma Private Limited.