`ಉಡುಪಿ ತಾಲೂಕಿನ ಪ್ರಾಚೀನ ದೇವಾಲಯಗಳು-ಭಾಗ-1' ಈ ಕೃತಿಯನ್ನು ಲೇಖಕ ರಾಜೇಶ್ ನಾಯ್ಕ ಅವರು ರಚಿಸಿದ್ದಾರೆ. ಉಡುಪಿ ತಾಲೂಕಿನ ಒಟ್ಟು 69 ದೇವಾಲಯಗಳ ಐತಿಹಾಸಿಕ ಶಾಸನೋಕ್ತ ಮಾಹಿತಿಗಳು ಸಚಿತ್ರವಾಗಿ ನೀಡಲಾಗಿದೆ. ಊರಿನ ನಟ್ಟನಡುವೆ ಇರುವ ಗಜಪೃಷ್ಠಾಕಾರ ಶೈಲಿಯ ಮಹಾದೇವ (ಈಗ ಅನಂತೇಶ್ವರ ಎಂದು ಕರೆಯಲ್ಪಡುತ್ತಿದೆ) ದೇವಸ್ಥಾನ ಉಡುಪಿಯ ಮೂಲ ದೇವರು, ಎಂಟನೇ ಶತಮಾನದಿಂದ ಅಸ್ತಿತ್ವದಲ್ಲಿರುವ ಈ ದೇಗುಲ ಬದಲಾವಣೆಗಳನ್ನು ಹಾಗೂ ಏಳುಬೀಳುಗಳನ್ನು ಕಂಡಿದೆ. ಕರ್ನಾಟಕದ ಅತ್ಯಂತ ಪುರಾತನ ಎರಡು ಜನಾರ್ದನ ಮೂರ್ತಿಗಳನ್ನು ತಾಲೂಕಿನ ಪೆರಂಪಳ್ಳಿ -ಮತ್ತು ಮಲ್ಲಂಪಳ್ಳಿ ಎಂಬಲ್ಲಿರುವ ದೇವಾಲಯಗಳಲ್ಲಿ ಕಾಣಬಹುದು. ಹೀಗೆ ಇನ್ನೂ ಹಲವು ದೇಗುಲಗಳ ಕೌತುಕಮಯ ವಿಷಯಗಳನ್ನು ಪುಸ್ತಕದಲ್ಲಿ ಕಾಣಬಹುದು. ಹೆಚ್ಚಿನ ದೇಗುಲಗಳು ಶಿಲಾಮಯವಾಗಿ ಜೀರ್ಣೋದ್ಧಾರಗೊಂಡಿದ್ದರೂ ಕೆಲವು ದೇಗುಲಗಳು ಇನ್ನೂ ತಮ್ಮ ಮೂಲ ರೂಪದಲ್ಲಿ ಅವನತಿಯತ್ತ ಸಾಗುತ್ತಿರುವುದೂ ಕಂಡುಬರುತ್ತದೆ. ಕಣ್ಣ ಮುಂದೆ ಇದ್ದೂ ಕಾಣದಂತಿರುವ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವೇ ಈ ಪುಸ್ತಕ.
©2024 Book Brahma Private Limited.