ಲ.ನ.ಸ್ವಾಮಿ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಪುರಾವೃತ್ತಾಂತʼ. ಪ್ರಸ್ತುತ ಕೃತಿ ಪ್ರಾಚೀನ ಸಂಸ್ಕೃತಿಯ ವೃತ್ತಾಂತಗಳ ಕುರಿತು ಹೇಳುತ್ತದೆ. ಪ್ರಾಚೀನ ಸಂಸ್ಕೃತಿ ಕುರಿತಂತೆ ಅನೇಕ ಸಂಶೋಧನ ಲೇಖನಗಳು ಈ ಕೃತಿಯಲ್ಲಿದೆ. ಶಾಸನಗಳಲ್ಲಿ ಪ್ರಾರ್ಥನೆ-ಅರ್ಥ-ಪ್ರಾಮುಖ್ಯತೆ, ಸಾಗರ ತಾಲೂಕು ಹಂದಿಗೋಡು ಗ್ರಾಮದ ಬಾನಿಯ ಶಾಸನದ ಪರಿಷ್ಕೃತ ಪಾಠ ಹಾಗೂ ಸಂಗಳ ಕೆರೆಯ ಶಿಲ್ಪಗಳು, ಶ್ರೀಪುರುಷನ ಮದಿಯನೂರಿನ ಶಾಸನ, ಇಮ್ಮಡಿ ಕೃಷ್ಣರಾಜ ಒಡೆಯರ ಕಾಮಕ್ಕಾನ್ ಪಾಳೆಯಂನ ಶಾಸನ, ಪ್ರಾಗಿತಿಹಾಸ ಕಾಲದ ಕರ್ನಾಟಕದ ಸಮಾಜ ಮತ್ತು ಜನಜೀವನ, ಕರ್ನಾಟಕದಲ್ಲಿ ವರ್ಣಚಿತ್ರಕಲೆ ಬೆಳವಣಿಗೆ ಒಂದು ಕಲಾ ಇತಿಹಾಸದ ಅವಲೋಕನ, ವರದಾ ನದಿಯಲ್ಲಿ ದೊರೆತಿರುವ ಸವಣೂರು ನವಾಬರ ಕಾಲದ ಜಲಸೌಧ, ಶ್ರೀರಂಗಪಟ್ಟಣದ ರಂಗನಾಥ ದೇವಾಲಯದಲ್ಲಿ ಆಚರಿಸುವ ಉತ್ಸವಗಳು, ಬೆಂಜಮಿನ್ ಲೂಯಿಸ್ ರೈಸ್ ಅವರ ಮೈಸೂರು ಅಂಡ್ ಕೂರ್ಗ್ ಫ್ರಮ್ ಇನ್ಸ್ಕ್ರಿಪ್ಷನ್ಸ್ ಕೃತಿಯ ಅವಲೋಕನ ಹೀಗೆ ಇತಿಹಾಸ ಮತ್ತು ಸಂಸ್ಕೃತಿ ಕುರಿತ ಅನೇಕ ಸಂಶೋಧನಾತ್ಮಕ ಲೇಖನಗಳು ಪ್ರಸ್ತುತ ಗ್ರಂಥದಲ್ಲಿವೆ.
©2024 Book Brahma Private Limited.