ಕೊಡಗಿನ ಸಂಸ್ಥಾನದ ರಾಜೇಂದ್ರ ನಾಮೆ-ಎಂಬ ಕೃತಿ ರಚಿಸಿದವರು ಫ.ಗು. ಹಳಕಟ್ಟಿ. 1780-1809 ಅವಧಿಯಲ್ಲಿ ಕೊಡಗಿನಲ್ಲಿ ಆಳಿದ ದೊಡ್ಡ ವೀರರಾಜೇಂದ್ರ ಅರಸರ ಚರಿತ್ರೆ ಇದು. ಕೊಡಗನ್ನು ಅತಿಕ್ರಮಿಸಬೇಕು ಎಂದು ಟಿಪ್ಪು ಸುಲ್ತಾನನ ಹೆಬ್ಬಯಕೆ ಆಗಿತ್ತು. ಆದರೆ, ಇದರಿಂದ ರಕ್ಷಣೆ ಪಡೆಯಲು ವೀರರಾಜೇಂದ್ರರು ಬ್ರಿಟಿಷರ ಸಹಾಯ ಪಡೆದು ರಾಜ್ಯವನ್ನು ಉಳಿಸಿಕೊಂಡರು. ವೀರರಾಜೇಂದ್ರರ ಜೀವಿತಾವಧಿಯಲ್ಲಿ ನಡೆದ ಘಟನೆ-ಸನ್ನಿವೇಶಗಳೂ ಸೇರಿದಂತೆ ಕೊಡಗು ದೊರೆಗಳ ವಂಶಾವಳಿಯಿಂದ ಹಿಡಿದು ತನ್ನ ಆಡಳಿತವರೆಗಿನ ಸರ್ವ ವೃತ್ತಾಂತ-ಆಡಳಿತವನ್ನು ಬರೆಯಿಸಿದ್ದೇ ಮತ್ತು ಅಲ್ಲಿಯ ವಿವರಗಳನ್ನು ಆಧರಿಸಿದ್ದೇ ಈ ಕೃತಿಯ ವೈಶಿಷ್ಟ್ಯ. ಅಂದಿನ ಕಾಲದಲ್ಲಿ ಕೊಡಗು ಪರಸರದಲ್ಲಿ ಕನ್ನಡ ಭಾಷೆಯ ಸ್ವರೂಪ ಹೇಗಿತ್ತು ಎಂಬುದೂ ಈ ಕೃತಿಯಿಂದ ತಿಳಿಯಬಹುದು. ಹೀಗಾಗಿ. ರಾಜೇಂದ್ರನಾಮೆ ಎಂಬುದು ಕರ್ನಾಟಕದ ಇತಿಹಾಸ ಗ್ರಂಥಗಳಲ್ಲಿ ಪ್ರಮುಖವಾದದ್ದು ಎಂದು ಹೇಳಲಾಗುತ್ತದೆ.
©2024 Book Brahma Private Limited.