ಸಾಮ್ರಾಜ್ಯದ ಇತಿಹಾಸವೂ ವಿಜಯನಗರದ ಚರಿತ್ರೆಯಾಗಿದೆ. ಆದ್ದರಿಂದ, ವೈಭವೀಕರಣ, ಕೋಮುವಾದಿ ಭಾವನೆ, ಅರಸು ಆರಾಧನೆಗಳು ಹೇರಳವಾಗಿ ಕಾಣ ಸಿಗುತ್ತವೆ. ಈ ಸಾಮ್ರಾಜ್ಯದ ಹುಟ್ಟು ಹಾಗೂ ಅವನತಿಯು ಅಧ್ಯಯನ ದೃಷ್ಟಿಯಿಂದ ಅಧ್ಯಯನ ಮಹತ್ವದ್ದು. ರಾಷ್ಟ್ರೀಯವಾದಿ -ಸಾಮ್ರಾಜ್ಯಶಾಹಿ ಹೀಗೆ ಎರಡೂ ಆಯಾಮಗಳಿಂದ ಈ ಚರಿತ್ರೆಯನ್ನು ವಿಶ್ಲೇಷಿಸಬಹುದು. ಇಲ್ಲಿಯ ಲೇಖನಗಳು ಈ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತವೆ. ಶಾಸನ-ಕಟ್ಟಡಗಳು-ನಾಣ್ಯಗಳು ಹೀಗೆ ವಿವಿಧ ಆಕರಗಳಿಂದಲೂ ವಿಜಯನಗರ ಸಾಮ್ರಾಜ್ಯದ ಚರಿತ್ರೆಯನ್ನು ಬರೆಯುವ ಹತ್ತು ಹಲವು ಅಗತ್ಯತೆಗಳನ್ನು ಈ ಕೃತಿ ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ, ವಿಜಯನಗರ ಸಾಮ್ರಾಜ್ಯದ ಸಂಸ್ಕೃತಿ, ಜನಜೀವನ, ಆಚಾರ-ವಿಚಾರಗಳು ಪ್ರತಿಯೊಂದರ ಅಧ್ಯಯನ ಹಾಗೂ ದಾಖಲೀಕರಣದ ಪ್ರಕ್ರಿಯೆಯಲ್ಲಿ ಮರು ಓದು ಅನಿವಾರ್ಯ. ಈ ಉದ್ದೇಶದ ಸಾಧನೆಯ ಹಾದಿಯಲ್ಲಿ ಈ ಕೃತಿಯು ಮಹತ್ವದ ಹೊಳವುಗಳನ್ನು ನೀಡುತ್ತದೆ.
©2024 Book Brahma Private Limited.