ಶೀಲಾಕಾಂತ ಪತ್ತಾರ ಅವರು ಬಾದಾಮಿಯ ಸಾಂಸ್ಕೃತಿಕ ಅಧ್ಯಯನ ಕುರಿತು ಬರೆದ ಕೃತಿ ಇದು. ಪ್ರದೇಶವಾರು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಿನ್ನತೆ ಇರುತ್ತದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ಬಾದಾಮಿಯ ಸಂಸ್ಖೃತಿಯೂ ಶ್ರೀಮಂತ. ಅದರ ಸಮಗ್ರ ಆಯಾಮಗಳನ್ನು ಕಟ್ಟಿಕೊಡುವ ಕಳಕಳಿಯನ್ನು ಲೇಖಕ ಡಾ. ಶೀಲಾಕಾಂತ ಪತ್ತಾರ ತೋರಿದ್ದಾರೆ.
ಬಾಗಲಕೋಟ ಜಿಲ್ಲೆಯ ಬಾದಾಮಿ ನಿವಾಸಿ ಆಗಿರುವ ಹಿರಿಯ ವಿದ್ವಾಂಸ ಡಾ. ಶೀಲಾಕಾಂತ ಪತ್ತಾರ ಅವರು ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿಯವರು. 1947ರ ಅಕ್ಟೋಬರ್ 7ರಂದು ಜನಿಸಿದ ಅವರು ಎಂಎ, ಡಿ.ಲಿಟ್, ಬಿ.ಎಡ್ ಪದವೀಧರರು. ನಿವೃತ್ತ ಉಪನ್ಯಾಸಕರಾಗಿರುವ ಅವರು ಡಾ. ರಾಧಾಕೃಷ್ಣನ್ ಅವರನ್ನು ಕುರಿತು ಜೀವನ ಚರಿತ್ರೆ ಪ್ರಕಟಿಸಿದ್ದಾರೆ. ಸಪ್ತಕ, ಕರ್ನಾಟಕದ ಸಾಂಪ್ರದಾಯಿಕ ಶಿಲ್ಪಕಲೆ (ಸಂಶೋಧನೆ) ಗ್ರಂಥಗಳನ್ನು ಪ್ರಕಟಿಸಿರುವ ಅವರ ’ಬಾದಾಮಿ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಡಿ.ಲಿಟ್. ದೊರೆತಿದೆ. ಇದು ಸತ್ಯಾನ್ವೇಷಣೆ, ಕೃಷ್ಣಪ್ರಭೆ (ಸಂಪಾದಿತ) ಪ್ರಕಟಿತ ಕೃತಿಗಳು. ...
READ MORE