ಕರ್ನಾಟಕದ ಚರಿತ್ರೆಯಲ್ಲಿ ಕನ್ನಡಿಗರು ತಮ್ಮ ಆಡಳಿತವನ್ನು ಕನ್ನಾಡಿಗೆ ಮಾತ್ರ ಸೀಮಿತಗೊಳಿಸಿಲ್ಲ. ಹಲವು ರಾಜ ಮನೆತನಗಳು ಈಗಿನ ಭೌಗೋಳಿಕ ಪ್ರದೇಶದಿಂದ ಬಹುದೂರದಲ್ಲಿ ಆಳ್ವಿಕೆ ನಡೆಸಿದ ಬಗ್ಗೆ ಮಾಹಿತಿ ದೊರೆಯುತ್ತದೆ. ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ಸಂಗತಿಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಕರ್ನಾಟದ ಸೇನರು ದೂರದ ಅದರಲ್ಲೂ ಉತ್ತರದಲ್ಲಿರುವ ಹಿಮಾಚಲವನ್ನು ಆಳಿದ ಸಂಗತಿಯನ್ನು ಕೇಂದ್ರವಾಗಿಟ್ಟುಕೊಂಡ ಕೃತಿಯಿದು. ಇಂಗ್ಲಿಷಿನಲ್ಲಿ ಡಾ. ಡಿ.ಬಿ. ಚಕ್ರವರ್ತಿ ಅವರು ರಚಿಸಿದ ಕೃತಿಯನ್ನು ಹಿರಿಯ ವಿದ್ವಾಂಸ-ಅನುವಾದ ಸದಾನಂದ ಕನವಳ್ಳಿ ಅವರು ಸೊಗಸಾಗಿ ಕನ್ನಡೀಕರಿಸಿದ್ದಾರೆ. ಇದೊಂದು ಅಪರೂಪದ-ಅಪೂರ್ವ ಕೃತಿ.
ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...
READ MORE