‘ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಈ ಕೃತಿ ಕನ್ನಡಿಗರ ಸಾಹಸಗಾಥೆಯನ್ನು ಕಣ್ಣ ಮುಂದಿಡುತ್ತದೆ. ನೂರಾರು ವರ್ಷಗಳ ಕೆಳಗೆ ದೂರದ ಬಂಗಾಳದಲ್ಲಿ, ಬಿಹಾರದಲ್ಲಿ, ಅಷ್ಟು ದೂರವಿರದ ತಮಿಳುನಾಡಿನಲ್ಲಿ ಕನ್ನಡಿಗರು ರಾಜ್ಯಗಳನ್ನು ಸ್ಥಾಪಿಸಿ ಆಳಿದರು ಎನ್ನುವುದು ರೋಮಾಂಚನಗೊಳಿಸುವ ಸಂಗತಿ. ಈ ರಾಜರಲ್ಲಿ ಹಲವಾರು ಸಮರ್ಥ ಆಡಳಿತಗಾರರೂ, ಕಲಾ ಪ್ರೇಮಿಗಳೂ ಆಗಿದ್ದರು. ಶ್ರೀ ರಂಗನಾಥಸ್ವಾಮಿ ಗುಡಿಯಲ್ಲಿ ಒಂದು ಸುಂದರ ಮತ್ತು ಚಿಕ್ಕದಾದ ಹೊಯ್ಸಳ ದೇವಸ್ಥಾನವಿದೆ. ಇಂತಹ ಹಲವು ಕುತೂಹಲಕರ ಸಂಗತಿಗಳು ಈ ಕೃತಿಯಲ್ಲಿವೆ.
©2024 Book Brahma Private Limited.