ನೂರಿನ್ನೂರು ವರ್ಷಗಳ ಹಿಂದೆ ಮೈಸೂತರಿನ ಚಿತ್ರಣವನ್ನು ಆ ಮೂಲಕ ಆಡಳಿತ ವ್ಯವಸ್ಥೆಯನ್ನು ಚಿತ್ರಿಸಿರುವ ಕೃತಿ ಇದು. ಪ್ರೊ. ಪಿ.ವಿ. ನಂಜರಾಜ ಅರಸು ಅವರು ರಚಿಸಿದ್ದು, ಸಚಿತ್ರ ಸಮೇತ ಇರುವ ಐತಿಹಾಸಿಕ ಮಾಹಿತಿ ಕೃತಿಯ ಹೆಚ್ಚುಗಾರಿಕೆಯಾಗಿದೆ.
ಮೈಸೂರು ನಿವಾಸಿಯಾಗಿರುವ ಡಾ. ಪಿ.ವಿ. ನಂಜರಾಜ ಅರಸು ಅವರು ಸದಾ ಹೊಸತನಕ್ಕೆ ತುಡಿಯುವವರು. ಬರವಣಿಗೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಇತಿಹಾಸ ಅಧ್ಯಯನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತರಾಗಿದ್ದರೆ, ಅವರು ನಿರ್ಮಿಸಿ ಮತ್ತು ನಿರ್ದೇಶಿಸಿದ 'ಸಂಕಲ್ಪ' (1974) ಚಲನಚಿತ್ರವು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಪೋಸ್ಟ್ ಮಾಸ್ಟರ್, ಚೌಕದ ದೀಪ, ತೂಗುದೀಪ, ಮಂಜು ಮುಸುಕಿದ ಹಾದಿ ಚಿತ್ರಗಳ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸಂಪಿಗೆ ಅರಳಿತು, ಟೀ ನಂತರದ ಕಪು, ಸಾಸರ್, ಮೋಡದ ನೆರಳು (ಕಥಾ ಸಂಕಲನಗಳು), ಹೊಸಿಲ ಬಳಿ, ಕಳೆದುಹೋದವರು (ಕಾದಂಬರಿಗಳು), ತ್ರಿಶಂಕುವಿನ ಮಕ್ಕಳು (ಕಿರುಕಾದಂಬರಿ), ನೀಲಿ ತೊರೆ, ಒಂದು ...
READ MORE