‘ಬೀದರ ಜಿಲ್ಲೆಯ ಸೂಫಿಗಳು’ ಪೊಲೀಸ್ ಅಧಿಕಾರಿ, ಲೇಖಕ ಶಕೀಲ್ ಐ.ಎಸ್ ಅವರ ಕೃತಿ. ಪೊಲೀಸರ ವೃತ್ತಿಧರ್ಮ ಮತ್ತು ನೈತಿಕತೆಯ ಕೊಂಡಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಹಿತ್ಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲಿ ಶಕೀಲ್ ಐ.ಎಸ್, ಒಬ್ಬರು.
ಸೃಜನಶೀಲ ಪಠ್ಯಗಳ ರಚನೆ, ಇತಿಹಾಸ, ಸಂಶೋಧನೆ, ಸೌಹಾರ್ದ ನೆಲೆಗಳ ಶೋಧನೆ, ಅವುಗಳ ಹಿನ್ನೆಲೆ, ಸೈದ್ಧಾಂತಿಕ ನಿಲುವುಗಳ ಅವಲೋಕನ ಮಾಡುವ ಜಾಯಮಾನ ಶಕೀಲ್ ಅವರದು. ಹುಮನಾಬಾದ ತಾಲ್ಲೂಕು ಇತಿಹಾಸ, ಹೈದರಾಬಾದ ಕರ್ನಾಟಕ ಇತಿಹಾಸ ಮತ್ತು ಬೀದರ ಜಿಲ್ಲೆಯ ಸೂಫಿಗಳು ಇವರ ಕೃತಿಗಳು.
ಸೂಫಿ ಒಂದು ಧರ್ಮ ಅಥವಾ ಪಂಥವಲ್ಲ. ಅದು ಜಗತ್ತಿನ ಎಲ್ಲ ಧರ್ಮ, ದಾರ್ಶನಿಕರ ವಿಚಾರಧಾರೆ ಒಳಗೊಂಡ ತತ್ವ ಸಿದ್ದಾಂತವಾಗಿದೆ. ಸೂಫಿಗಳ ಪ್ರೇಮೋಪದೇಶವು ಅರಿವು, ತಿಳಿವಳಿಕೆ, ಜ್ಞಾನಮಾರ್ಗವನ್ನು ಅನುಭಾವದ ಹಿನ್ನೆಲೆಯಲ್ಲಿ ಕೇಂದ್ರಿಕೃತಗೊಂಡು ಜಗತ್ತಿನ ಬಹುತೇಕ ನೆಲೆಗಳನ್ನೆಲ್ಲ ಒಳಗೊಂಡಿದೆ. ಕಾಲ, ದೇಶ, ಸಂದರ್ಭವನ್ನೆಲ್ಲ ಬಳಸಿಕೊಂಡು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದೆ. ದೇಶ ವಿದೇಶಗಳಿಂದ ಆಗಮಿಸಿರುವ ಸೂಫಿಗಳ ಅನನ್ಯತೆಗಳು; ಬೀದರ ಜಿಲ್ಲೆಯಲ್ಲಿರುವ ಸೂಫಿಗಳ ನೆಲೆಗಳು, ಅವರು ಕಟ್ಟಿಕೊಟ್ಟ ಮಾನವ ಧರ್ಮದ ಚಿಂತನೆ, ಅರಸೊತ್ತಿಗೆ ಮತ್ತು ಜನಸಾಮಾನ್ಯರ ಕೊಂಡಿಗಳಾಗಿ ಮೆರೆದಿರುವ 190ಕ್ಕೂ ಸೂಫಿಸಂತರ ಜೀವನ ವಿಧಾನ, ಮಾನವೀಯ ಸಂವೇದನೆ, ಸೌಹಾರ್ದತೆಯ ಕೇಂದ್ರಗಳು, ಅವರು ವಾಸಿಸಿದ ದರ್ಗಾ, ಖಾನ್ಕಾ, ಸಮಾಖಾನಾಗಳನ್ನು ಕ್ಷೇತ್ರಕಾರ್ಯದ ಮೂಲಕ ಗುರುತಿಸಿದ್ದಾರೆ.
ಐ.ಎಸ್. ಶಕೀಲ್ ಅವರು ಮೂಲತಃ ಬೀದರ ಜಿಲ್ಲೆಯ ಖೇಣಿ ರಂಜೋಳ ಗ್ರಾಮದವರು. ಹುಟ್ಠೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಂಗಲಗಿಯಲ್ಲಿ ಪ್ರೌಢಶಿಕ್ಷಣ ಹಾಗೂ ಹುಮನಾಬಾದ ಪಟ್ಟಣದಲ್ಲಿ ಪಿ.ಯೂ. ಕಾಲೇಜು ಹಾಗೂ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಹುಮನಾಬಾದದ ಸಹಾಯಕ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕಾನ್ ಸ್ಟೇಬಲ್ ಆಗಿರುವ ಶಕೀಲ್, ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ. ಕೃತಿಗಳು: ಅಭಿವೃದ್ಧಿ ಪಥ (ಲೇಖನಗಳ ಸಂಗ್ರಹ), ಹೈ-ಕ ಇತಿಹಾಸ (ಮೌರ್ಯರ ಕಾಲದಿಂದ ಹೈದರಾಬಾದ್ ನಿಜಾಂ ಕಾಲದವರೆಗೆ), ಹುಮನಾಬಾದ್ ತಾಲೂಕು ಇತಿಹಾಸ, ಮೂರು ನಾಟಕಗಳು-ಸಂಗ್ರಹ, ದೇಶ ಮತ್ತು ಪ್ರಗತಿ (ಲೇಖನಗಳ ಸಂಗ್ರಹ) ,ಬೀದರ ಜಿಲ್ಲೆಯ ಸೂಫಿಗಳು, ನಳ-ದಮಯಂತಿ ಕಥೆ ಹೀಗೆ ಕೃತಿಗಳನ್ನು ರಚಿಸಿದ್ದು, ಸ್ಥಳೀಯವಾಗಿ ...
READ MORE