ಬಹಮನಿ ಸಾಮ್ರಾಜ್ಯ

Author : ದೇವು ಪತ್ತಾರ

Pages 198

₹ 185.00




Year of Publication: 2015
Published by: ಸಾಹಿತ್ಯ ಅಕಾಡೆಮಿ
Phone: 9886407011

Synopsys

ದೇವು ಪತ್ತಾರ ಅವರ" ಬಹಮನಿ ಸಾಮ್ರಾಜ್ಯ" ಕೃತಿಯು ಕಲಬುರಗಿ-ಬೀದರ್ ರಾಜಧಾನಿಯಾಗಿದ್ದ ಬಹಮನಿ ಸಾಮ್ರಾಜ್ಯದ ಕುರಿತು ಮಾಹಿತಿಯುಳ್ಳದ್ದಾಗಿದೆ. ಗುಲ್ಬರ್ಗಾ, ಬೀದರ ನಗರಗಳನ್ನು ರಾಜಧಾನಿಯಾಗಿಸಿಕೊಂಡು ಆಳಿದ ಬಹಮನಿ ಅರಸರ ಕಾಲದಲ್ಲಿ ಪಾರಸಿ ಬಾಷೆ,ಕಲೆ ಸಂಸ್ಕೃತಿಗಳು ಗಾಢವಾದ ಪ್ರಭಾವವನ್ನು ಕರ್ನಾಟಕದಲ್ಲಿ ಬೀರಿದ್ದವು.ಬಹಮನಿ ಅರಸು ಫಿರೋಜ್ ಖಾನ್ ನು ವಿಜಯನಗರದ ಅರಸು ಪ್ರೌಢರಾಯನ ಮಗಳನ್ನು ಮದುವೆಯಾದ ಸಂಗತಿ ಬಹಮನಿ ಮತ್ತು ಕರ್ನಾಟಕದ ಈಶಾನ್ಯ ಭಾಗದಲ್ಲಿ ಪಾರ್ಸಿ ಮತ್ತು ಭಾರತೀಯ ಸಂಸ್ಕೃತಿಗಳ ಕೊಡು- ಕೊಳೆ ಸಹಜವಾಗಿ ಸ್ಥಾಪಿಸಲ್ಪಟ್ಟಿತು. ಉರ್ದು ಬಾಷೆಯ ಮೊದಲ ಗದ್ಯ ಲೇಖಕ ಸೂಫೀ ಸಂತ ಖ್ವಾಜಾ ಬಂದೇನವಾಜರು ಗುಲ್ಬರ್ಗಾಕ್ಕೆ ಬಂದು ನೆಲೆನಿಂತಿದ್ದರಿಂದ ಅವರ ಅನುಬಾವದ ಸಂಪತ್ತಿನೊಂದಿಗೆ,ರಾಜ್ಯಾಡಳಿತದ ಅಪಾರ ಜ್ಞಾನ ಸಂಪತ್ತೂ ಈಶಾನ್ಯ ಬಾಗದ ಕರ್ನಾಟಕಕ್ಕೆ ಲಭಿಸಿತ್ತು ಎಂಬುದು ಗಮನಾರ್ಹ ಸಂಗತಿ. ಇದಲ್ಲದೇ ಒಂದೆನೇ ಮುಹಮ್ಮದ್,ಒಂದನೇ ದಾವುದ್,ಎರಡನೇ ಮುಹಮ್ಮದ್,ಘಿಯಾಸುದ್ದೀನ್ ತಹಮ್ತನ್, ಶಂಸುದ್ದೀನ್ ಎರಡನೇ ದಾವುದ್,ತಾಜುದ್ದೀನ್ ಫಿರೋಜ್, ಇನ್ನೂ ಅನೇಕ ದೊರೆಗಳ ಹೋರಾಟ, ದಂಗೆ,ಸಾಮ್ರಾಜ್ಯ ಶಾಯಿ,ಪಲಾಯನ ದ ಸಂದರ್ಭಗಳನ್ನು ಈ ಪುಸ್ತಕ ತನ್ನ ಗರ್ಬದಲ್ಲಿ ಹಿಡಿದಿಟ್ಟುಕೊಂಡಿದೆ.

About the Author

ದೇವು ಪತ್ತಾರ
(15 May 1973)

ಪತ್ರಕರ್ತ, ಲೇಖಕ ದೇವು ಪತ್ತಾರ ಅವರು ಮೂಲತಃ ಯಾದಗಿರಿ ಜಿಲ್ಲೆ ಶಹಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಲಿಂಗ್ವಿಸ್ಟಿಕ್ಸ್‌ ಹಾಗೂ ಟ್ರಾನ್ಸಲೇಷನ್‌ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ. ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕ ಹಾಗೂ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಮೀಡಿಯಾದಲ್ಲಿ ಪ್ರಧಾನ ಸಂಪಾದಕರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಉದ್ಯೋಗ ಖಾತ್ರಿ ಮತ್ತು ವಲಸೆ ಕುರಿತು ಅಧ್ಯಯನ ವರದಿ ಮಂಡಿಸಿರುವ ಇವರು ...

READ MORE

Related Books