ಕರ್ನಾಟಕದ ರೈತಚಳುವಳಿಯನ್ನು ಆಧರಿಸಿ ಈ ಕೃತಿಯೂ ರಚನೆಗೊಂಡಿದೆ. ಕರ್ನಾಟಕದ ಜನಮಾನಸಕ್ಕೆ ಸ್ವಾಭಿಮಾನವನ್ನು, ಅಖಿಲ ಭಾರತ ಮಟ್ಟದಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಸಾಂಸ್ಕೃತಿಕ ಮನ್ನಣೆಯನ್ನೂ ತಂದುಕೊಡುವಲ್ಲಿ ಭಾಷಾ ಚಳವಳಿಗಳಷ್ಟೇ ಪ್ರಧಾನ ಪಾತ್ರನ್ನು ರೈತ ಚಳುವಳಿಗಳು ವಹಿಸಿದೆ. ರೈತಾಪಿ ವರ್ಗಗಳ ಬದುಕು, ಬವಣೆ, ಸವಾಲುಗಳನ್ನು ಮುನ್ನಲೆಗೆ ತರುತ್ತದೆ. ರೈತ ಚಳುವಳಿ ತನ್ನ ಮೂಲ ಆಶಯದ ಬಗ್ಗೆಯೇ ಗೊಂದಲಕ್ಕೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಡಾ. ಸವಿತರವರ ಈ ಕೃತಿ ರೈತ ಚಳುವಳಿಗಳ ಗತವನ್ನು ಮೆಲುಕು ಹಾಕುತ್ತಲೇ ಭವಿಷ್ಯದ ಚಳುವಳಿಗೆ ದಿಕ್ಸೂಚಿಯಾಗಿ ಮೂಡಿಬಂದಿದೆ.
ಲೇಖಕಿ ಸವಿತ ಬಿ. ಸಿ. ಅವರು ಮೂಲತಃ ತುಮಕೂರಿನವರು. ಅವರು 1983ರಲ್ಲಿ ಜನಿಸಿದರು. ಎಂ. ಡಿ. ನಂಜುಂಡಸ್ವಾಮಿ ಅವರ ಚಿಂತನೆ ಹಾಗೂ ಹೋರಾಟಗಳ ಕುರಿತು ಸವಿತ ಅವರು ವಿಶ್ಲೇಷಿಸಿರುವ ಕೃತಿ ‘ಹಸಿರುಶಾಲು ಬಾರುಕೋಲು’. ...
READ MORE