ಲೇಖಕ ಡಾ. ರಾಜಶೇಖರ ಇಚ್ಚಂಗಿ ಅವರ ಇತಿಹಾಸಕ್ಕೆ ಸಂಬಂಧಪಟ್ಟ ಕೃತಿ ʻಸವದತ್ತಿಯ ರಟ್ಟರುʼ. ರಟ್ಟ ರಾಜವಂಶವು ಒಂದು ಪುಟ್ಟ ಭಾರತೀಯ ರಾಜವಂಶ. ಇವರು ರಾಷ್ಟ್ರಕೂಟರ ಶಾಖೆಯಾಗಿ ಆಳ್ವಿಕೆ ಮಾಡಿದವರು. ರಟ್ಟರ ಮೂಲ ಸ್ಥಾನ ಲಾತೂರ. ʻಲಟ್ಟನೂರ ಪುರವರಾಧೀಶ್ವರʼರೆಂದು ಅವರು ತಮ್ಮನ್ನು ಕರೆದುಕೊಂಡಿದ್ದಾರೆ. ಇವರು ಸವದತ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ಬೆಳಗಾವಿ, ಧಾರವಾಡ ಹಾಗೂ ಬಿಜಾಪುರ ಜಿಲ್ಲೆಯ ಬಹುಭಾಗಗಳನ್ನು ಆಳಿದ ಬಗ್ಗೆ ಶಾಸನದಿಂದ ತಿಳಿದುಬಂದಿದೆ. ಈ ಕೃತಿಯಲ್ಲಿ ಲೇಖಕರು ಸವದತ್ತಿ ರಟ್ಟರ ಇತಿಹಾಸ, ಕಲೆ, ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ ಸೇರಿದಂತೆ ಹಲವಾರು ವಿಚಾರಗಳನ್ನು ವಿಶ್ಲೇಷಿಸಿದ್ದಾರೆ.
©2024 Book Brahma Private Limited.