‘ಅಮರ ಸುಳ್ಯದ ರೈತ ಹೋರಾಟ (1834-1837)’ ಡಾ. ಪುರುಷೋತ್ತಮ ಬಿಳಿಮಲೆ ಅವರ ಕೃತಿ. ಈ ಕೃತಿಗೆ ಪ್ರೊ.ಅಶೋಕ ಶೆಟ್ಟರ್ ಮುನ್ನುಡಿ ಬರೆದು ‘ದೇಶದ ರಾಜಧಾನಿಯಲ್ಲಿ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಮೂರು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಬೀಡುಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಇದಕ್ಕಿಂತ ಸುಮಾರು ಎರಡು ಶತಮಾನ ಮೊದಲು ನಡೆದ, ಅಮರ ಸುಳ್ಯದ ರೈತ ಹೋರಾಟವೆಂದು ಪರಿಚಿತವಾದ, ಟಿಪ್ಪು ಪತನಾನಂತರ ತಮ್ಮ ಅಧಿಕಾರ ವ್ಯಾಪ್ತಿಯಡಿ ಬಂದ ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟವನ್ನು ಕುರಿತ ಡಾ. ಪುರುಷೋತ್ತಮ ಬಿಳಿಮಲೆಯವರ ಈ ಪುಸ್ತಕ ಪ್ರಕಟವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಕೃತಿಯಲ್ಲಿ ಮೊದಲಿಗೆ ಪ್ರವೇಶದೊಂದಿಗೆ ಪ್ರಾಂತೀಯ ಹೋರಾಟಗಳು, ಮಾಹಿತಿ ಸಂಗ್ರಹ, ಸುಳ್ಯ ಮತ್ತು ಕೊಡಗು ಪರಿಸರದ ರೈತ ಸಮುದಾಯಗಳು, ರೈತ ಹೋರಾಟದ ಸಹಭಾಗಿಗಳು, ರೈತರ ಅಸಮಾಧಾನದ ಕಾರಣಗಳು, ಹೋರಾಟದ ಮುಖ್ಯ ಘಟ್ಟಗಳು ಮತ್ತು ಅವುಗಳ ವಿವರಗಳು, ವಿಫಲಗೊಂಡ ಹೋರಾಟ, ದೈವೀಕರಣ ಮತ್ತು ನಕಲೀಕರಣ ಪ್ರಕ್ರಿಯೆಗಳು ಹಾಗೂ ಸಮಾರೋಪ ಎಂಬ 10 ಅಧ್ಯಾಯಗಳಿವೆ.
©2024 Book Brahma Private Limited.