ಕಲ್ಯಾಣ ಕರ್ನಾಟಕದ ಅರಸು ಮನೆತನಗಳು

Author : ಎಂ. ಕೊಟ್ರೇಶ್‌

Pages 182

₹ 120.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಅಲಕ್ಷಿತ ರಾಜಮನೆತನಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ರಚಿಸಿರುವ ಕೃತಿ ’ಕಲ್ಯಾಣ ಕರ್ನಾಟಕದ ಅರಸು ಮನೆತನಗಳು’. ಹೈದರಾಬಾದ್ ಕರ್ನಾಟಕದ ವಿವಿಧ ಅರಸು ಮನೆತನಗಳ ಕುರಿತುಲೇಖಕ ಡಾ. ಎಂ. ಕೊಟ್ರೇಶ್ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಬ್ರಿಟೀಷರ ಆಳ್ವಿಕೆ ಕಾಲದಲ್ಲಿ ಕರ್ನಾಟಕವನ್ನು ಪ್ರಮುಖವಾಗಿ ನಾಲ್ಕು ಭಾಗಗಳಾಗಿ ಮಾಡಿಕೊಳ್ಳಲಾಗಿತ್ತು. ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ, ಮೈಸೂರ್ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ. ಇವುಗಳು ಆಡಳಿತ ಹಾಗೂ ರಾಜಕೀಯ ಕಾರಣಕ್ಕೆ ಅಂದು ಕರ್ನಾಟಕವನ್ನು ಹರಿದು ಹಂಚಿಕೊಂಡ ಭೂಭಾಗಗಳು. ಸ್ವಾತಂತ್ರ್ಯದ ತರುವಾಯ ಏಕೀಕರಣೋತ್ತರವಾಗಿ ಅಖಂಡ ಕರ್ನಾಟಕವನ್ನು ಜಿಲ್ಲಾವಾರು ವಿಭಾಗಗಳನ್ನಾಗಿ ಮಾಡಿ ಆಡಳಿತ ನಡೆಸುತ್ತಿರುವುದು ನಮಗೆಲ್ಲಾ ತಿಳಿದ ಸಂಗತಿ. ಅಲ್ಲದೆ ಚರಿತ್ರೆಯಲ್ಲಿ ದಾಖಲಾಗಿದ್ದ ಈ ಹಳೇ ವಿಭಾಗಗಳ ನೆರೆರಾಜ್ಯಗಳ ಹೆಸರುಗಳನ್ನು ಕೈಬಿಟ್ಟು ಕರ್ನಾಟಕದ ಆಯಾ ಭಾಗಗಳ ಕೇಂದ್ರ ಹಾಗೂ ಇತಿಹಾಸ ಪ್ರಸಿದ್ಧ ನಗರಗಳ ಹೆಸರುಗಳಿಂದ ವಿಭಾಗಗಳ ಮರುನಾಮಕರಣ ಮಾಡುವುದರ ಮೂಲಕ ಅಪ್ಪಟ ಕನ್ನಡ ಚರಿತ್ರೆಯನ್ನು ಮರುಸ್ಥಾಪಿಸುತ್ತಿರುವುದು ಸ್ತುತ್ಯಾರ್ಹವಾದದು. ಈ ಹಿನ್ನಲೆಯಲ್ಲಿ ಡಾ.ಎಂ.ಕೊಟ್ರೇಶ್ ಅವರ ' ಕಲ್ಯಾಣ ಕರ್ನಾಟಕದ ಅರಸುಮನೆತನಗಳು ' ಎಂಬ ಶೀರ್ಷಿಕೆಯ ಪುಸ್ತಕ ಗಮನ ಸೆಳೆಯುತ್ತದೆ. ಹೈದರಾಬಾದ್ ಕರ್ನಾಟಕವನ್ನೆ ಇಲ್ಲಿ ಕಲ್ಯಾಣ ಕರ್ನಾಟಕ ಎಂದು ಕರೆದಿರುವುದು. ಕಲ್ಯಾಣವು ಚರಿತ್ರೆಯಲ್ಲಿ ಹೆಚ್ಚು ಮಹತ್ವತೆಯನ್ನು ಪಡೆದಿದೆ. ಈ ಭಾಗದಲ್ಲಿ ಆಳಿದ ಅರಸು ಮನೆತನಗಳ ಚರಿತ್ರೆಯನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಪ್ರಸ್ತಾವನೆ, ರಂಜೋಳದ ಸಿಂದರು, ಕುರುಗೋಡು ಸಿಂದರು, ಗೆಜ್ಜಲಗಟ್ಟಿ ದೇಸಾಯಿಗಳು, ನೊಳಂಬರು, ಜರಿಮಲೆ ನಾಯಕರು, ಗುಡೇಕೋಟೆ ಪಾಳೆಯಗಾರರು,  ಕನಕಗಿರಿ ಪಾಳೆಯಗಾರರು, ಉಚ್ಚಂಗಿ ಪಾಂಡ್ಯರು, ಆನೆಗೋಂದಿ ಪಾಳೆಯಗಾರರು, ರಾಯಚೂರು ಜಿಲ್ಲೆಯ ಕೆಲವು ನಾಯಕ ಮನೆತನಗಳು, ಕೆಂಚನಗುಡ್ಡದ ನಾಡಗೌಡರು, ಯಲಬುರ್ಗಿ ಸಿಂದರು-  ಈ ಅರಸು ಮನೆತನಗಳ ಕುರಿತಾದ ಲೇಖನಗಳು ಇವೆ.

About the Author

ಎಂ. ಕೊಟ್ರೇಶ್‌

ಪ್ರಾಧ್ಯಾಪಕರು, ಬರಹಗಾರರು ಆಗಿರುವ ಎಂ. ಕೊಟ್ರೇಶ್‌ ಅವರು ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕೋಟೆಗಳು, ರಕ್ಷಣಾ ಸ್ಮಾರಕಗಳು, ಕುರಿತು ಹಲವರು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books