ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ಚಾಲುಕ್ಯ ವಾಸ್ತು ಶಿಲ್ಪ. ವಿಜ್ಞಾನ, ಇತಿಹಾಸ, ಸಾಹಿತ್ಯ, ಕಲೆ, ಚಿತ್ರಕಲೆ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಲೇಖಕರು, ಚಾಲುಕ್ಯರ ವಾಸ್ತು ಶಿಲ್ಪದ ವೈಭವ ಕುರಿತಂತೆ ಇತಿಹಾಸದ ಮಾಹಿತಿಗಳನ್ನು ಸಂಗ್ರಹಿಸಿ ನೀಡಿರುವ ಕೃತಿ ಇದು. ಚಾಲುಕ್ಯ ವಾಸ್ತುಶಿಲ್ಪದ ಸಮಗ್ರ ಚಿತ್ರಣ ನೀಡುತ್ತದೆ. ವಾಸ್ತುಶಿಲ್ಪ ಸಾಧನೆ, ಶಿಲ್ಪಗಳ ವಿವಿಧ ಮಾದರಿಗಳು, ಶೈಲಿ, ಗಾತ್ರ, ಮರಳುಗಲ್ಲು, ನಾಗರ ಹಾಗೂ ದ್ರಾವಿಡ ಶೈಲಿಯ ರಚನೆಗಳು, ಕೊರೆದ ಗುಹೆಗಳು, ಸ್ತೂಪಗಳು, ಕಾಂಚಿದೇವಾಲಯ ಇತ್ಯಾದಿ ಮಾಹಿತಿ ಒಳಗೊಂಡಿದೆ. ಅಗತ್ಯವಿದ್ದೆಡೆ ಬಳಸಿರುವ 73 ಚಿತ್ರಗಳು ಓದುಗರ ಗಮನ ಸೆಳೆಯುತ್ತವೆ.
ಬೆಂಗಳೂರಿನ (ಮೈಸೂರು ರಾಜ್ಯ) ಲಲಿತಕಲಾ ಅಕಾಡೆಮಿಯು 1969ರಲ್ಲಿ (ಪುಟ: 79) ಈ ಕೃತಿಯನ್ನು ಮೊದಲ ಬಾರಿಗೆ ಹಾಗೂ ತದನಂತರ, ಇದೇ ಪ್ರಕಾಶನವು 1991ರಲ್ಲಿ (ಪುಟ: 103) ಪ್ರಕಟಿಸಿತ್ತು.
©2024 Book Brahma Private Limited.