ಸಂಶೋಧಕ ಕಪಟರಾಳ ಕೃಷ್ಣರಾಯರು ‘ಕರ್ನಾಟಕ ಲಾಕುಳಶೈವರ ಕುರಿತು ನೀಡಿದ ಉಪನ್ಯಾಸವೇ ಈ ಕೃತಿ. 10-11ನೇ ಶತಮಾನಗಳ ಮಧ್ಯೆ ಲಾಕುಳಶೈವರ ಬಗ್ಗೆ ಉಲ್ಲೇಖಗಳು ಸಿಗುತ್ತವೆ. ಇವರು ಕೆಚ್ಚಿನ ಶಿವ ಉಪಾಸಕರು, ನೈಷ್ಠಿಕರು ಆಗಿದ್ದರು. ಬಸವಣ್ಣನವರ ಕ್ರಾಂತಿ ನಂತರ ಇವರ ಉಲ್ಲೇಖಗಳು ಕಾಣ ಸಿಗುವುದಿಲ್ಲ. ವೀರಶೈವರೊಂದಿಗೆ ಬೆರೆತು ಹೋಗಿರಬೇಕು ಎಂದು ಊಹಿಸಲಾಗುತ್ತಿದೆ. ಲಾಕುಳಶೈವರು ಯಾರು? ಅವರ ಆಚಾರ ವಿಚಾರಗಳೇನು? ಈ ಪಂಥಕ್ಕೆ ಲಾಕುಳಶೈವರು ಎಂಬ ಹೆಸರು ಬಂದಿದ್ದು ಹೇಗೆ? ಅಂದಿನ ಇತಿಹಾಸದಲ್ಲಿ ಅವರ ಸ್ಥಾನಮಾನಗಳೇನು? ಅವರು ಅವನತಿಯಾದ ಬಗೆ ಹೆಗೆ? ಇತ್ಯಾದಿ ವಿಷಯ ಕುರಿತು ಕಟಪರಾಳ ಕೃಷ್ಣರಾಯರು ಕನ್ನಡ ಸಂಶೋಧನೆ ಸಂಸ್ಥೆಯ ಪರವಾಗಿ ಧಾರವಾಡದಲ್ಲಿ ಆಯೋಜಿಸಿದ್ದ (1955) ಉಪನ್ಯಾಸ ಮಾಲಿಕೆಯಡಿ ನೀಡಿದ ವಿದ್ವತ್ ಪೂರ್ಣ ಉಪನ್ಯಾಸವೇ ಈ ಕೃತಿ.
ಕಪಟರಾಳ ಕೃಷ್ಣರಾಯರು ಸಾಹಿತಿ, ಸಂಶೋಧಕ, ಸ್ವಾತಂತ್ಯ್ರ ಹೋರಾಟಗಾರ ಹಾಗೂ ಸಮಾಜ ಸೇವಕರಾಗಿದ್ದವರು. ಸುರಪುರ ಬಳಿಯ ಹಾಲಗಡಲಿ ಎಂಬ ಹಳ್ಳಿಯಲ್ಲಿ ದಿನಾಂಕ 3, ಡಿಸೆಂಬರ್ 1889 ರಲ್ಲಿ ಜನಿಸಿದರು. ಸುರಪುರದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಕಪಟರಾಳರು ಮಿಡಲ್ ಪರೀಕ್ಷೆಯವರೆಗೂ ಸುರಪುರದಲ್ಲಿಯೇ ಓದಿದರು. ಸರ್ಕಾರಿ ಶಾಲೆಗೆ ಸೇರಿದ ಇವರು ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರು. ಜೊತೆಯಲ್ಲಿ ಪಾರ್ಸಿ ಭಾಷೆಯನ್ನು ಕಲಿತರು. ಮೆಟ್ರಿಕ್ ಅಭ್ಯಾಸಕ್ಕೆ ಹೈದರಾಬಾದ್ ಗೆ ಹೋದರು. ಕ್ರಿ.ಶ. 1910ರಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಪೂರೈಸಿದರು. ಮನೆಪಾಠವನ್ನು ಹೇಳಿ ತಮ್ಮ ವಕೀಲಿ ಪರೀಕ್ಷೆಗೆ ತಯಾರಾದರು. ನಂತರ ಪೂನಾಕ್ಕೆ ತೆರಳಿ ವಕಾಲತ್ ಪರೀಕ್ಷೆಯನ್ನು ...
READ MORE